Wednesday, 14th May 2025

ಎಲ್ಲ ತ್ಯಜಿಸಿ ಕನಕರಾದರು; ಹರಿಸೇವೆಗೈದು ದಾಸರಾದರು

ತನ್ನಿಮಿತ್ತ ಪ್ರೊ.ಶ್ರೀನಿವಾಸ ಮೂರ್ತಿ ಎನ್.ಸುಂಡ್ರಹಳ್ಳಿ ಕೀರ್ತನ ಸಾಹಿತ್ಯವೆಂದರೆ ನೆನಪಾಗುವುದೇ ದಾಸರು. ದಾಸರೆಂದರೆ ನೆನಪಾಗುವುದೇ ಕನಕದಾಸರು ಮತ್ತು ಪುರಂದರ ದಾಸರು. ಇವರಲ್ಲಿ ಕನಕದಾಸರಿಗೆ ವಿಶಿಷ್ಟ ಸ್ಥಾನವಿದೆ. ಕೀರ್ತನಕಾರರಾಗಿ, ಕವಿಗಳಾಗಿ; ಸಾಹಿತ್ಯ, ಸಂಗೀತ, ಅಧ್ಯಾತ್ಮ, ಸಮಾಜ, ಧರ್ಮ ಹೀಗೆ ಹಲವು ಸ್ತರಗಳಲ್ಲಿ ಕನಕದಾಸರ ಸೇವೆ ಸ್ತುತ್ಯರ್ಹ ಕರ್ನಾಟಕದ ಮಟ್ಟಿಗೆ 15 ಮತ್ತು 16ನೇ ಶತಮಾನ ದಾಸರಯುಗ ಎಂದೇ ದಾಖಲಾಗಿದೆ. ದಾಸ ಪರಂಪರೆಯಲ್ಲಿ ಬರುವ ಸುಮಾರು 250ಕ್ಕೂ ಹೆಚ್ಚು ದಾಸರಲ್ಲಿ ಪ್ರಮುಖರಾದವರು ಪುರಂದರದಾಸರು ಮತ್ತು ಕನಕದಾಸರು. ಅದರಲ್ಲೂ ಶ್ರೇಷ್ಠ ದಾಸರು ಮತ್ತು […]

ಮುಂದೆ ಓದಿ