Wednesday, 14th May 2025

ಸ್ತಬ್ಧಚಿತ್ರ ಮೆರವಣಿಗೆಗೆ ಮಧುಕೇಶ್ವರ ದೇವಸ್ಥಾನ ಎದುರು ಚಾಲನೆ

ಶಿರಸಿ: ಪಂಪನ ನಾಡು ಬನವಾಸಿಯ ಗತ ವೈಭವವನ್ನು ಪರಿಚಯಿಸುವ ಕದಂಬೋತ್ಸವ ಸ್ತಬ್ಧಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಂಗಳವಾರ ಮಧುಕೇಶ್ವರ ದೇವಸ್ಥಾನದ ಎದುರು ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳಿಂದ ಕುಂಭಮೇಳ ಹಾಗೂ ಪಥ ಸಂಚಲನ ಭಾರತ ಸೇವದಳ, ಸ್ಕೌಟ್ಸ್ ಮತ್ತು ಗೈಡ್ ಸಮವಸ್ತ್ರದೊಂದಿಗೆ ಆಕರ್ಷಕ ಪಥ ಸಂಚಲನ, ವಿವಿಧ ಸರ್ಕಾರದ ಇಲಾಖೆಗಳಿಂದ ಸ್ತಬ್ಧ ಚಿತ್ರಗಳು ಅತ್ಯಾಕರ್ಷಕ ವಾದ್ಯ ತಂಡಗಳೊಂದಿಗೆ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು. ಮಧುಕೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಟ ಮೆರವಣಿಗೆ ಕದಂಬ ವೃತ್ತದ ಮೂಲಕ ಮಯೂರವರ್ಮ ವೇದಿಕೆಯತ್ತ ಸಾಗಿತು. […]

ಮುಂದೆ ಓದಿ