ಟೋಕೊಯೊ: ಸೋಮವಾರ (ಜ. 13) ಸಂಜೆಯ ವೇಳೆಗೆ ಜಪಾನ್‌ನ ದಕ್ಷಿಣ ಭಾಗದಲ್ಲಿರುವ ಕ್ವೆಶು (Kyushu) ಪ್ರಾಂತ್ಯದಲ್ಲಿರುವ ಸಮುದ್ರದೊಳಗೆ ಪ್ರಬಲವಾದ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪರಿಣಾಮವಾಗಿ ಜಪಾನ್ ಹಾಗೂ ಹಿಂದೂ ಮಹಾಸಾಗರದ ದಡದಲ್ಲಿರುವ ಎಲ್ಲ ದೇಶಗಳಿಗೆ ಸುನಾಮಿ (Tsunami) ಅಲರ್ಟ್ ಘೋಷಿಸಲಾಗಿದೆ (Japan Earthquake). ಸಮುದ್ರದಲ್ಲಿ ಆರಂಭಿಕ ಹಂತದಲ್ಲಿ 3.2 ಅಡಿಗಳವರೆಗೆ ಅಲೆಗಳು ಏಳಲಾರಂಭಿಸಿವೆ. ಭೂಕಂಪದ ತೀವ್ರತೆ ಹೆಚ್ಚಿರುವುದರಿಂದ ಸಮುದ್ರದಲ್ಲಿ ಸುನಾಮಿ ಏಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. […]