ಜಮೈಕಾ: ಅಥ್ಲೀಟ್ ಜಮೈಕಾ ದೇಶದ ಉಸೇನ್ ಬೋಲ್ಟ್ ವಂಚಕ ಕಂಪನಿಯೊಂದರ ಜಾಲಕ್ಕೆ ಸಿಲುಕಿ, ಮಿಲಿಯನ್‌ಗಟ್ಟಲೆ ಡಾಲರ್ ಕಳೆದು ಕೊಂಡಿದ್ದಾರೆ. ಉಸೇನ್ ಬೋಲ್ಟ್‌ರ ಹೂಡಿಕೆ ವ್ಯವಹಾರಗಳನ್ನು ನಿಭಾಯಿಸುವ ಕಂಪನಿ, ಮಾಜಿ ವೇಗದ ಓಟಗಾರ ಬೋಲ್ಟ್ ವಂಚನೆಗೊಳಗಾಗಿ ಮಿಲಿಯನ್‌ಗಟ್ಟಲೆ ಡಾಲರ್ ನಷ್ಟ ಅನುಭವಿಸಿದ್ದಾರೆ ಎಂಬ ಸಂಗತಿಯನ್ನು ಬಹಿರಂಗಗೊಳಿ ಸಿದ್ದು, ಇದರ ಬೆನ್ನಿಗೇ ಸದರಿ ಕಂಪನಿಯ ಕಾರ್ಯನಿರ್ವಹಣೆ ಪ್ರಶ್ನೆಗೊಳ ಗಾಗಿದೆ. ಉಸೇನ್ ಅವರ ಹೂಡಿಕೆ ವ್ಯವಹಾರಗಳನ್ನು ಸದರಿ ಆರ್ಥಿಕ ಕಂಪನಿಯು ಕಳೆದ ಒಂದು ದಶಕದಿಂದ ನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಪ್ರಕರಣದ ಕುರಿತು […]