Saturday, 10th May 2025

ಐಟಿ ದಿಗ್ಗಜ IBM ಮುಖ್ಯಸ್ಥರಾಗಿ ಭಾರತೀಯ ಅರವಿಂದ್ ಕೃಷ್ಣ ನೇಮಕ

ಜಾಗತಿಕ ಮಟ್ಟದ ಮಾಹಿತಿ ತಂತ್ರಜ್ಞಾನ ಜಗತ್ತಿನ ದಿಗ್ಗಜ ಸಂಸ್ಥೆಗಳ ಅತ್ಯುನ್ನತ ಹುದ್ದೆಗಳಲ್ಲಿರುವ ಭಾರತೀಯರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಕಂಪ್ಯೂಟಿಂಗ್ ಜಗತ್ತಿನ ದೈತ್ಯ ಸಂಸ್ಥೆಗಳಲ್ಲಿ ಒಂದಾದ IBM ಮುಖ್ಯಸ್ಥರಾಗಿ ಅರವಿಂದ್ ಕೃಷ್ಣ ನೇಮಕಗೊಂಡಿದ್ದಾರೆ. ಐಐಟಿ-ಕಾನ್ಪುರದ ಪ್ರಾಡಕ್ಟ್ ಆಗಿರುವ ಕೃಷ್ಣ, ಏಪ್ರಿಲ್ 6ರಿಂದ ಕಂಪನಿಯ ಮುಖ್ಯಸ್ಥರಾಗಿ ಪಾದಾರ್ಪಣೆ ಮಾಡಲಿದ್ದಾರೆ. ಸಿಇಓ ವರ್ಜಿನಿಯಾ ರೊಮೆಟ್ಟಿ ವಿದಾಯದಿಂದ ತೆರವಾದ ಸ್ಥಾನವನ್ನು ಕೃಷ್ಣ ಭರಿಸಲಿದ್ದಾರೆ. ನಿವೃತ್ತ ಸೇನಾಧಿಕಾರಿಯ ಪುತ್ರರಾದ ಕೃಷ್ಣ, 57, ಆಂಧ್ರ ಪದೇಶದ ಪಶ್ಚಿಮ ಗೋದಾವರಿ ಜಿಲ್ಲೆಯವರಾಗಿದ್ದಾರೆ. ಕಾನ್ಪುರ ಐಐಟಿಯಲ್ಲಿ ಬಿ.ಟೆಕ್‌ […]

ಮುಂದೆ ಓದಿ