Monday, 12th May 2025

ಏಳನೇ ಆವೃತ್ತಿಯ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ ಉದ್ಘಾಟನೆ

ನವದೆಹಲಿ: ಪ್ರಗತಿ ಮೈದಾನದ ‘ಭಾರತ ಮಂಟಪ’ದಲ್ಲಿ ಏಳನೇ ಆವೃತ್ತಿಯ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ (ಐಎಂಸಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು. ದೇಶದಾದ್ಯಂತದ ಆಯ್ದ ಶಿಕ್ಷಣ ಸಂಸ್ಥೆಗಳಿಗೆ 100 ‘5ಜಿ ಲ್ಯಾಬ್‌’ ಗಳನ್ನು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿತರಿಸಿದರು. ಬಳಿಕ ಮಾತನಾಡಿದ ಅವರು, ತಂತ್ರಜ್ಞಾನದಲ್ಲಿನ ದೈನಂದಿನ ಬದಲಾವಣೆಗಳೊಂದಿಗಿನ ಭವಿಷ್ಯ ಇಲ್ಲಿದೆ. ದೇಶದಲ್ಲಿ ನಾವು 5ಜಿ ಸೇವೆ ವಿಸ್ತರಿಸುವುದು ಮಾತ್ರವಲ್ಲದೆ 6ಜಿ ತಂತ್ರಜ್ಞಾನದಲ್ಲೂ ಮುಂಚೂಣಿಯತ್ತ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು. ಈ ವೇಳೆ ಅಧಿಕ ವೇಗದ ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಒದಗಿಸಲು […]

ಮುಂದೆ ಓದಿ