Wednesday, 14th May 2025

ಪತ್ನಿ ಮೇಲಿನ ಕೋಪದಿಂದ ಮನೆಗೆ ಬೆಂಕಿ ಹಚ್ಚಿದ….ಸುಟ್ಟೋಯ್ತು ಹತ್ತು ಮನೆ….

ಮುಂಬೈ; ತನ್ನ ಪತ್ನಿಯೊಂದಿಗೆ ಜಗಳವಾಡಿದ ಪತಿರಾಯ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಅಕ್ಕಪಕ್ಕದ 10 ಮನೆಗಳು ಸಹ ಸುಟ್ಟು ಕರಕಲಾಗಿವೆ. ಕೋಪಗೊಂಡ ನೆರೆಹೊರೆಯವರು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಹಾರಾಷ್ಟ್ರದ ಸತಾರದ ಪಟಾನ್‌ನಲ್ಲಿರುವ ಮಜಗಾಂವ್ ಹಳ್ಳಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತ್ನಿ ಜೊತೆ ಜಗಳವಾಡಿದ ಪತಿ ಕೋಪಗೊಂಡು ಹಚ್ಚಿದ ಬೆಂಕಿ ಇಡೀ ಪ್ರದೇಶವೇ ಸುಟ್ಟು ಹೋಗುವಂತೆ ಮಾಡಿದೆ. ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಪತಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ವೇಗವಾಗಿ ಬೇರೆ ಪ್ರದೇಶಕ್ಕೂ ಹರಡಿಕೊಂಡಿದೆ. […]

ಮುಂದೆ ಓದಿ