Wednesday, 14th May 2025

ನೈಸರ್ಗಿಕ ಅನಿಲ ಸೋರಿಕೆಯಿಂದ ಸ್ಫೋಟ: 22 ಜನರು ಸಾವು

ಹವಾನಾ: ಕ್ಯೂಬಾದ ಐಷಾರಾಮಿ ಹೋಟೆಲ್‌ ಸರಟೋಗಾದಲ್ಲಿ ನೈಸರ್ಗಿಕ ಅನಿಲ ಸೋರಿಕೆಯಿಂದ ಉಂಟಾದ ಪ್ರಬಲ ಸ್ಫೋಟದಲ್ಲಿ 22 ಜನರು ಮೃತ ಪಟ್ಟಿದ್ದಾರೆ. ಹವಾನಾದ 96 ಕೊಠಡಿಗಳ ಈ ಹೋಟೆಲ್ ನವೀಕರಣಗೊಳ್ಳುತ್ತಿದ್ದ ಕಾರಣ ದಿಂದ ಯಾವುದೇ ಪ್ರವಾಸಿಗರು ತಂಗಿರಲಿಲ್ಲ. ಇದರಿಂದಾಗಿ ದುರಂತ ತಪ್ಪಿದೆ ಎಂದು ಹವಾನಾ ಗವರ್ನರ್ ಜಪಾಟಾ ಮಾಹಿತಿ ನೀಡಿದರು. ಘಟನೆಯಲ್ಲಿ ಕನಿಷ್ಠ 74 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 14 ಮಕ್ಕಳು ಸೇರಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಆಸ್ಪತ್ರೆ ಸೇವೆಗಳ ಮುಖ್ಯಸ್ಥ ಡಾ. ಜೂಲಿಯೊ ಗುರ್ರಾ ಇಜ್ಕ್ವಿರ್ಡೊ ತಿಳಿಸಿದ್ದಾರೆ. […]

ಮುಂದೆ ಓದಿ