Monday, 12th May 2025

ಗೋವಾ ಫಿಲ್ಮ್ ಫೆಸ್ಟ್’ಗೆ ಚಾಲನೆ ನೀಡಿದ ಕಿಚ್ಚ ಸುದೀಪ್‌

ಪಣಜಿ: ಇಂದಿನಿಂದ ಆರಂಭಗೊಳ್ಳುತ್ತಿರುವ 51ನೇ ಭಾರತೀಯ ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸ್ಯಾಂಡಲ್‍ ವುಡ್ ನಟ,  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಕಾರ್ಯಕ್ರ ಮಕ್ಕೆ ಚಾಲನೆ ನೀಡಿದರು. ಇದು ಕನ್ನಡ ನಟರಿಗೆ ಸಿಗುತ್ತಿರುವ ಮಹೋನ್ನತ ಗೌರವವಾಗಿದೆ ಎಂದು ಕಿಚ್ಚ ಸುದೀಪ್‍ ಹೇಳಿದರು. ಒಟ್ಟು ಒಂಬತ್ತು ದಿನಗಳ ಚಿತ್ರೋತ್ಸವದಲ್ಲಿ 60 ದಿನಗಳ 224 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ ಕೂಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಮುಂದೆ ಓದಿ