ಹೈದರಾಬಾದ್: ಹೈದರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿಯಿಂದ ಶಾರ್ಟ್ ಸರ್ಕ್ಯೂಟ್ ಸಂಭ ವಿಸಿದ್ದು ಸಿಬ್ಬಂದಿಯ ಸಮಯ ಪ್ರಜ್ಞೆ ಯಿಂದ ಭಾರೀ ಅನಾಹುತ ತಪ್ಪಿದೆ. ಗಾಂಧಿ ಆಸ್ಪತ್ರೆಯ ನೆಲ ಮಹಡಿಯಲ್ಲಿರುವ ವಿದ್ಯುತ್ ಘಟಕದ ಪೆಟ್ಟಿಗೆಗೆ ಬೆಂಕಿ ತಗುಲಿ ಮೂರು ಮಹಡಿಗಳಲ್ಲಿ ವಿದ್ಯುತ್ ಕೇಬಲ್‌ಗಳಿಗೆ ಹರಡಿತ್ತು. ರೋಗಿಗಳು ದಾಖಲಾಗಿದ್ದ ನಾರ್ತ್ ಬ್ಲಾಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಆಸ್ಪತ್ರೆ ಆಡಳಿತ ಮಂಡಳಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಕ್ಯಾಂಪಸ್ ಒಳಗೆ ಫೈರ್ ಔಟ್ ಪೋಸ್ಟ್ ಇರುವುದರಿಂದ, […]