Wednesday, 14th May 2025

ಜಾರ್ಖಂಡ್‌ ಶಿಕ್ಷಣ ಸಚಿವ ನಿಧನ

ಚೆನ್ನೈ: ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜಾರ್ಖಂಡ್‌ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ಅವರು ಗುರುವಾರ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋವಿಡ್‌ ಕಾರಣದಿಂದಾಗಿ 2020ರ ನವೆಂಬರ್‌ನಲ್ಲಿ ಜಗರ್ನಾಥ್‌ ಅವರಿಗೆ ಶ್ವಾಸಕೋಶದ ಕಸಿ ಮಾಡಲಾಗಿತ್ತು. ನಂತರ ಕಾಣಿಸಿಕೊಂಡ ಆರೋಗ್ಯದ ತೊಂದರೆಗಳಿಂದಾಗಿ ಅವರನ್ನು ಕಳೆದ ತಿಂಗಳು ಚೆನ್ನೈಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ‘ಜಗರ್ನಾಥ್‌ ಮಹ್ತೋ ಇಂದು ಕೊನೆಯುಸಿರೆಳೆದರು’ ಎಂದು ‘ಎಂಜಿಎಂ ಹೆಲ್ತ್‌ಕೇರ್‌’ನ ಡಾ.ಅಪರ್ ಜಿಂದಾಲ್ ತಿಳಿಸಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಮಹತೋ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಮುಂದೆ ಓದಿ