Wednesday, 14th May 2025

ದುರ್ಗಾ ಮಾತೆಯ ವಿಸರ್ಜನೆ: ಎಂಟು ಸಾವು

ಜಲ್ಪೈಗುರಿ: ವಿಜಯದಶಮಿಯಲ್ಲಿ ದುರ್ಗಾ ಪೂಜೆಯ ಬಳಿಕ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ 8 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನದಿಯಲ್ಲಿ ದುರ್ಗಾ ಮಾತೆಯ ವಿಸರ್ಜನೆ ನಡೆಯುತ್ತಿರುವ ಸಂದರ್ಭ ನೀರಿನ ಪ್ರಮಾಣ ಹೆಚ್ಚಾಗಿದ್ದು, ನಾಲ್ವರು ಮಹಿಳೆಯರ ಸಹಿತ ಎಂಟು ಮಂದಿ ಮುಳುಗಿ ಮೃತಪಟ್ಟಿರುವುದು ದೃಢಪಟ್ಟಿದೆ. ಹಲವರು ಕಣ್ಮರೆಯಾಗಿದ್ದು, ಅವರ ಪತ್ತೆಗಾಗಿ ಕಾರ್ಯಾ ಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಘಡದಲ್ಲಿ ಸಿಲುಕಿ ಎಂಟು ಮಂದಿ ಮೃತಪಟ್ಟಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ. ಸುಮಾರು 50 ಮಂದಿಯನ್ನು ರಕ್ಷಿಸಲಾಗಿದೆ.

ಮುಂದೆ ಓದಿ

ವಿಮಾನಗಳ ಲ್ಯಾಂಡಿಂಗ್‌ಗೆ ಅಡ್ಡಿಯೆಂದು ಲೇಸರ್ ಪ್ರದರ್ಶನ ರದ್ದು

ಕೋಲ್ಕತ್ತಾ : ಪೂರ್ವ ಕೊಲ್ಕತ್ತಾದ ಶ್ರೀಭೂವಿು ದುರ್ಗಾಪೂಜೆ ಪೆಂಡಾಲ್‌ನ ಲೇಸರ್ ಪ್ರದರ್ಶನದಿಂದ ವಿಮಾನಗಳ ಲ್ಯಾಂಡಿಂಗ್‌ಗೆ ಕಷ್ಟವಾಗುತ್ತಿದೆ ಎಂದು ವಿಮಾನ ಪೈಲಟ್‌ಗಳು ದೂರು ನೀಡಿದ ಹಿನ್ನೆಲೆ ಯಲ್ಲಿ ಲೇಸರ್...

ಮುಂದೆ ಓದಿ