Thursday, 15th May 2025

ಇಂಪಾಸಿಬಲ್ ಪದವನ್ನು ಮನಸ್ಸಿನೊಳಗೆ ಬಿಟ್ಟುಕೊಳ್ಬೇಡಿ

ರಿಚರ್ಡ್ ಬ್ರಾಾನ್ಸನ್ ಕನಸುಗಳನ್ನು ಬೆನ್ನತ್ತಿ ಹೋದವನು. ಒಂದೊಂದೇ ಕನಸನ್ನು ಹಿಡಿದು ಮಾತಾಡಿಸಿ, ಅದನ್ನು ಒಲಿಸಿಕೊಂಡು ಸಾಕಾರ ಮಾಡಿದವನು. ಹೊಸ ಹೊಸ ಸವಾಲುಗಳಿಗೆ ಮುಖಾಮುಖಿಯಾದವನು. ಅಸಾಧ್ಯವೆನಿಸುವುದೆಲ್ಲವನ್ನೂ ಸಾಧ್ಯ ಮಾಡಿ ತೋರಿಸಿದವನು. ಅಂದುಕೊಂಡಿದ್ದೆಲ್ಲವನ್ನೂ ಮಾಡಿದ ಬಳಿಕ ಇನ್ನು ಸುಮ್ಮನಿರಬೇಕಲ್ಲ ಎಂದು ಚಡಪಡಿಸಿ ತನಗೆ ತಾನೇ ಹೊಸ ಸವಾಲುಗಳನ್ನು ಎಳೆದುಕೊಂಡು ಅವುಗಳನ್ನು ಈಡೇರಿಸಲು ಎದೆಯೊಡ್ಡುತ್ತಿಿರುವ ಪರಮ ಹುಂಬ, ಮಹಾಸಾಹಸಿ. ಹಣ ಮಾಡುವುದನ್ನೇ ಕಾಯಕ ಮಾಡಿಕೊಳ್ಳದೇ, ಜೀವನವನ್ನು ಇಡಿಯಾಗಿ ಅನುಭವಿಸುವ ಅದಮ್ಯ ಉತ್ಸಾಾಹಿ. ನನಗೆ ಅವನೊಬ್ಬ ಉದ್ಯಮಿ, ಶ್ರೀಮಂತನಷ್ಟೇ ಆಗಿದ್ದರೆ ಖಂಡಿತವಾಗಿಯೂ ಇಷ್ಟವಾಗುತ್ತಿಿರಲಿಲ್ಲ. […]

ಮುಂದೆ ಓದಿ