Monday, 12th May 2025

ಕೊರೊನಾ ನಿಯಮ ಉಲ್ಲಂಘನೆ: 500 ಮಂದಿ ವಿರುದ್ಧ ಪ್ರಕರಣ ದಾಖಲು

ಥಾಣೆ: ಕೊರೊನಾ ನಿಯಮ ಉಲ್ಲಂಘಿಸಿ ಬರ್ತ್ ಡೇ ಸಮಾರಂಭದಲ್ಲಿ ಸೇರಿದ್ದ 500 ಮಂದಿ ವಿರುದ್ಧ ಪ್ರಕರಣ ದಾಖಲಿಸ ಲಾಗಿದೆ. ಡೆಸ್ಲಾಪಾಡಾದಲ್ಲಿ ಫೆಬ್ರವರಿ 17 ಮತ್ತು 18 ರ ಮಧ್ಯರಾತ್ರಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಡೊಂಬಿವಿಲಿ ಮುನಿಸಿಪಲ್ ಕಾರ್ಪೋರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ. ಜನಸಮೂಹದ ವಿರುದ್ಧ ವಿಪತ್ತು ನಿರ್ವಹಣಾ ನಿಯಂತ್ರಣ ನಿಯಮಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಮಾಸ್ಕ್ ದರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್ ಉಲ್ಲಂಘಿಸಿ ಹುಟ್ಟು ಹಬ್ಬ ಆಚರಿಸಲು ಅಧಿಕ ಮಂದಿ ಸೇರಿದ್ದರು.

ಮುಂದೆ ಓದಿ