ಅನಿಸಿಕೆ ಡಾ.ಪ್ರಕಾಶ್ ಕೆ.ನಾಡಿಗ್ ಫೆಬ್ರವರಿ 26ರಿಂದ ಹಾವೇರಿಯಲ್ಲಿ ಮೂರುದಿನಗಳ ಕಾಲ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡಿರುವುದು ಕೇಳಿ ಆಶ್ಚರ್ಯವಾಯಿತು. ಪ್ರಪಂಚ ಕರೋನಾ ಎಂಬ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ಇಂಥ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಜಾತ್ರೆ ನಡೆಸಲು ಹೊರಟಿರು ವುದು ಎಷ್ಟು ಸಮಂಜಸ? ಇಂಥ ಸಂಕಷ್ಟದಲ್ಲೂ ಕಸಾಪಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಯೋಚನೆ ಬಂದದ್ದೆ ವಿಪರ್ಯಾಸ! ಕರೋನಾದಿಂದ ಕರ್ನಾಟಕವೂ ಇನ್ನೂ ಹೊರಬಂದಿಲ್ಲ. ಸಾಮಾಜಿಕ […]