Defectors MLA : ಹಿಮಾಚಲ ಪ್ರದೇಶ ಸರ್ಕಾರವು ಅಭೂತಪೂರ್ವ ಕ್ರಮವೊಂದರಲ್ಲಿ ಪಕ್ಷಾಂತರಿಗಳಿಗೆ ಪಿಂಚಣಿ ನಿಲ್ಲಿಸಲು ಹೊಸ ಮಸೂದೆಯನ್ನು ಇಂದು ವಿಧಾನಸಭೆಯಲ್ಲಿ ಅಂಗೀಕರಿಸಿತು. ಪಕ್ಷಾಂತರ ಮಾಡುವ ಶಾಸಕರ ಪಿಂಚಣಿಯನ್ನು ನಿಲ್ಲಿಸುವ ಮಸೂದೆಯನ್ನು ನಿನ್ನೆ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಹಿಮಾಚಲ ಪ್ರದೇಶ ವಿಧಾನಸಭೆ (ಸದಸ್ಯರ ಭತ್ಯೆ ಮತ್ತು ಪಿಂಚಣಿ) ತಿದ್ದುಪಡಿ ಮಸೂದೆ 2024 ಎಂಬ ಮಸೂದೆಯನ್ನು ಮಂಡಿಸಿದ್ದರು.