ಶರಣಬಸಪ್ಪಾ .ಎನ್ ಕೆ ಇಂಡಿ: ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಿಸಿ ಸದೃಢ ಶರೀರದಲ್ಲಿ ಸದೃಢ ಮನಸ್ಸು ಇರುತ್ತದೆ ಎಂಬ ಸದಾಶಯ ದೊಂದಿಗೆ ಸರಕಾರ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭಿಸಿದೆ. ಆದರೆ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಒದಗಿಸುತ್ತಿರುವ ಕ್ಷೀರ ಭಾಗ್ಯ ಯೋಜನೆ ಕಳೆದ ೪-೫ ತಿಂಗಳುಗಳಿಂದ ಸರಿಯಾಗಿ ವಿತರಣೆ ಮಾಡದೆ ಹಳ್ಳ ಹಿಡಿದಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಹೌದು. ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸರಕಾರ ಮಧ್ಯಾಹ್ನ ಬಿಸಿಯೋಟ ಯೋಜನೆ ಪ್ರಾರಂಭಿಸಿದೆ. ಆದರೆ […]