Thursday, 15th May 2025

ಕಾರ್ಯದೊತ್ತಡ : ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ

ಕಣ್ಣೂರು: ಕೆಲಸದ ಒತ್ತಡ ತಡೆದುಕೊಳ್ಳಲು ಸಾಧ್ಯವಾಗದೆ ಬ್ಯಾಂಕ್ ಮ್ಯಾನೇಜರ್ ರೊಬ್ಬರು ಶುಕ್ರವಾರ ಬ್ಯಾಂಕ್ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಕುತ್ತುಪರಂಬದಲ್ಲಿ ಸಂಭವಿಸಿದೆ. ಖಾಸಗಿ ಬ್ಯಾಂಕಿನ ತೊಕ್ಕಿಲಂಗಡಿ ಶಾಖೆಯ ವ್ಯವಸ್ಥಾಪಕಿ ಕೆ ಸ್ವಪ್ನಾ(38) ಅವರು ಬೆಳಗ್ಗೆ ಬ್ಯಾಂಕ್ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಸಕ್ಕೆ ಬಂದ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವು ದನ್ನು ನೋಡಿ ಅಲಾರಾಂ ಒತ್ತಿದ್ದಾರೆ. ತಕ್ಷಣ ಸ್ಥಳೀಯ ಜನರ […]

ಮುಂದೆ ಓದಿ