Sunday, 11th May 2025

ಬಚ್ಚೇಗೌಡರ ರಾಜಕೀಯ ವಾನಪ್ರಸ್ಥ

-ಎಂ.ಕೆ.ಭಾಸ್ಕರ ರಾವ್ ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿ ಸದ್ಯ ಕಮಲ ಪಾಳಯದಲ್ಲಿರುವ, ಕೊಳದಲ್ಲಿದ್ದರೂ ಕಮಲದೊಂದಿಗೆ ಇಲ್ಲದಂತಿರುವ ಬಚ್ಚೇಗೌಡರು, ಮಗ ಶರತ್ ಬಚ್ಚೇಗೌಡರ ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ ಸ್ವಂತ ರಾಜಕಾರಣಕ್ಕೆ ಎಳ್ಳುನೀರು ಬಿಡಲು ನಿರ್ಧರಿಸಿದ್ದಾರೆ ಎನ್ನುವುದು ಅವರ ಮತಕ್ಷೇತ್ರದ ಅನೇಕರ ಅಭಿಮತ. ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ಪ್ರಧಾನಿಯಾಗಿದ್ದ ೯೬-೯೭ರ ಸಮಯದಲ್ಲಿ ಸರಿದಾಡುತ್ತಿದ್ದ ಜೋಕುಗಳಲ್ಲಿ ಒಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯ ಬಿ.ಎನ್. ಬಚ್ಚೇಗೌಡರನ್ನು ಕುರಿತಾದುದು. ಬೆಂಡಿಗಾನಹಳ್ಳಿ ನಾರಾಯಣ ಗೌಡ ಬಚ್ಚೇಗೌಡರು ಆಗ ಜನತಾದಳದಲ್ಲಿ ಬಹಳ ಸಕ್ರಿಯರಾಗಿದ್ದ ರಾಜಕಾರಣಿ. […]

ಮುಂದೆ ಓದಿ