Wednesday, 14th May 2025

ಚೀತಾ ಹೆಲಿಕಾಪ್ಟರ್ ಪತನ: ಓರ್ವ ಪೈಲಟ್ ಸಾವು

ತವಾಂಗ್ : ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಬಳಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಬುಧವಾರ ಪತನ ಗೊಂಡಿದೆ. ಅಪಘಾತದಲ್ಲಿ ಒರ್ವ ಪೈಲಟ್ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ತವಾಂಗ್ ಸಮೀಪದ ಮುಂಚೂಣಿ ಪ್ರದೇಶದಲ್ಲಿ ಹಾರಾಡುತ್ತಿದ್ದ ಸೇನಾ ವಿಮಾನ ಯಾನ ಚೀತಾ ಹೆಲಿಕಾಪ್ಟರ್ ಬುಧವಾರ ಬೆಳಿಗ್ಗೆ ಅಪಘಾತಕ್ಕೀಡಾಗಿದೆ. ಇನ್ನು ಇಬ್ಬರೂ ಪೈಲಟ್’ಗಳನ್ನು ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೈಲಟ್‍ಗಳಲ್ಲಿ ಒಬ್ಬರು ಚಿಕಿತ್ಸೆಯ ಸಮಯದಲ್ಲಿ ತಮ್ಮ ಗಾಯಗಳಿಂದ ಮೃತಪಟ್ಟಿದ್ದಾರೆ. ಇನ್ನೊಬ್ಬ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಮುಂದೆ ಓದಿ