ಬೆಂಗಳೂರು: ಹಾಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರು ಪುಲಿಕೇಶಿ ನಗರದ ಟ್ಯಾನರಿ ರಸ್ತೆಯಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 132ನೇ ಅಂಬೇಡ್ಕರ್ ಜಯಂತಿಯನ್ನು ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಆಚರಿಸಿದರು. ಈ ವೇಳೆ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ತಳಪಾಯ ಹಾಕಿಕೊಟ್ಟ ಮಹನೀ ಯರು. ಸಮಾನತೆ ಸಮಾಜದ ಕನಸು ಕಂಡಂತಹ ಮಹನೀಯರಾದ ಅವರು ನಮ್ಮ ಭಾರತದ ಹೆಮ್ಮೆಯ ವ್ಯಕ್ತಿತ್ವ. ಸಂವಿಧಾನ ಎಂಬ […]