Wednesday, 14th May 2025

ಟ್ರಕ್ ಗೆ ಕಾರು ಡಿಕ್ಕಿ: ಐದು ಮಂದಿ ಸಜೀವ ದಹನ

ಉತ್ತರ ಪ್ರದೇಶ : ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇನಲ್ಲಿ ಟ್ರಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಐವರು ಸಜೀವ ದಹನವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಟ್ರಕ್ ಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಐವರು ಸಜೀವ ದಹನವಾದ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಖಾಂಡೌಲಿ ಪ್ರದೇಶದಲ್ಲಿ ಘಟನೆ ವರದಿಯಾಗಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ ಲಕ್ನೋದಿಂದ ಬಂದ ವ್ಯಕ್ತಿಯ ಹೆಸರಿನಲ್ಲಿ ಕಾರನ್ನು ನೋಂದಣಿ ಮಾಡಲಾಗಿದೆ.

ಮುಂದೆ ಓದಿ