ಅಮರಾವತಿ: ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಆಂಧ್ರಪ್ರದೇಶದ ಅಂಗನವಾಡಿ ಗಳಿಗೆ ನಿಗದಿಯಂತೆ ಹಾಲು ಪೂರೈಸಲಾಗದು ಎಂದು ಕರ್ನಾಟಕ ಹಾಲು ಒಕ್ಕೂಟವು ತಿಳಿಸಿದೆ. ಆಂಧ್ರ ಸರ್ಕಾರವು ₹ 130 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಹಾಲಿನ ದರವನ್ನು ಪರಿಷ್ಕರಿಸಿ ಲೀಟರಿಗೆ ₹ 5 ಏರಿದ್ದು, ಇದಕ್ಕೆ ಸಮ್ಮತಿ ನೀಡ ಬೇಕಾಗಿದೆ ಎಂದು ಒಕ್ಕೂಟ ತಿಳಿಸಿದೆ. ಒಕ್ಕೂಟವು ಹಾಲು ಪೂರೈಕೆ ಸ್ಥಗಿತಗೊಳಿಸಿದಲ್ಲಿ ಅಂಗನವಾಡಿಯಲ್ಲಿರುವ 20 ಲಕ್ಷ ಮಕ್ಕಳು ಹಾಲು ಸೌಲಭ್ಯದಿಂದ ವಂಚಿತ ರಾಗಲಿದ್ದಾರೆ. ಆಂಧ್ರ ಸರ್ಕಾರದ ‘ಸಂಪೂರ್ಣ ಪೋಷಣಾ ಯೋಜನೆ’ಯಡಿ ಅಂಗನ […]