-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದ ಫ್ಯಾಷನ್‌ನಲ್ಲಿ ಮಕ್ಕಳನ್ನು ಬೆಚ್ಚಗಿಡುವುದರೊಂದಿಗೆ ಕ್ಯೂಟಾಗಿ ಬಿಂಬಿಸಬಲ್ಲ ಫ್ಯಾಷನ್‌ವೇರ್‌ಗಳು (Winter Kids Fashion) ಮಾರುಕಟ್ಟೆಗೆ ಕಾಲಿಟ್ಟಿವೆ. ಹೌದು, ಚಳಿಗಾಲದ ಮಕ್ಕಳ ಡಿಸೈನರ್‌ವೇರ್‌ಗಳಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಸಾಕಷ್ಟು ಬದಲಾವಣೆಯಾಗಿದೆ. ಮೊದಲಿನ ಹಾಗೆ, ಕೇವಲ ಒಂದು ಜಾಕೆಟ್ ಹಾಗೂ ಸ್ವೆಟರ್ ಹಾಕಿದರೇ, ಮಕ್ಕಳ ಮಳೆಗಾಲದ ಫ್ಯಾಷನ್ ಕಂಪ್ಲೀಟ್ ಆಗುವುದಿಲ್ಲ! ಬದಲಿಗೆ, ಟ್ರೆಂಡ್‌ನಲ್ಲಿರುವ ನಾನಾ ಡಿಸೈನ್‌ನ ವುಲ್ಲನ್, ನಿಟ್ವೇರ್, ಫರ್, ಟ್ರೆಂಚ್ಕೋಟ್, ಕೋಟ್ ಡ್ರೆಸ್, ಟೈಟ್ ಟ್ರೆಗ್ಗಿಂಗ್ಸ್, ಜೆಗ್ಗಿಂಗ್ಸ್, ಪಾಕೆಟ್ ಪ್ಯಾಂಟ್ಸ್ , ಫುಲ್ ಸ್ಲೀವ್ ಸೆಟ್ ಡಂಗ್ರೀಸ್, ಡಬ್ಬಲ್-ತ್ರಿಬಲ್ ಲೇಯರ್ ಡ್ರೆಸ್‌ಗಳು, ಫಂಕಿ ಜಾಕೆಟ್‌ಗಳು ಸೇರಿದಂತೆ ನಾನಾ ಬಗೆಯ ಮಿನಿ ಡಿಸೈನವೇರ್‌ಗಳನ್ನು ಆಯ್ಕೆ ಮಾಡಿದಲ್ಲಿ ಚಿಣ್ಣರನ್ನು ಆಕರ್ಷಕವಾಗಿಸಬಹುದು ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರಿಚಾ ಸೂರಿ.

ಬೇಡಿಕೆ ಹೆಚ್ಚಿಸಿಕೊಂಡ ಮಕ್ಕಳ ಲೇಯರ್ಡ್ ಲುಕ್ ಔಟ್‌ಫಿಟ್ಸ್
ಪುಟ್ಟದಾಗಿರುವ ಡ್ರೆಸ್‌ಗಳು. ಮಿನಿ, ಶಾರ್ಟ್ ಮಿಡಿ, ಕ್ರಾಪ್ ಟಾಪ್, 2 ಪೀಸ್ ಡ್ರೆಸ್, ಮೈಕ್ರೋ, ಮಿನಿ ಸ್ಕರ್ಟ್‌ಗಳು ಚಿಕ್ಕ ಫ್ರಾಕ್, ಹಾಲ್ಟರ್, ಬಾರ್ಡಟ್ ನೆಕ್, ಕೋಲ್ಡ್ ಶೋಲ್ಡರ್, ಆಫ್ ಶೋಲ್ಡರ್‌ನ ಟಾಪ್‌ಗಳು ಹಾಗೂ ಉಡುಪುಗಳು ಇದೀಗ ಈ ಸೀಸನ್‌ನಲ್ಲಿ ಸೈಡಿಗೆ ಸರಿದಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರಿಚಾ. ಅವರ ಪ್ರಕಾರ, ಈ ಸೀಸನ್‌ನಲ್ಲಿ ದೇಹವನ್ನು ಬೆಚ್ಚಗಿಡುವಂತಹ ಲೇಯರ್ ಲುಕ್ ನೀಡುವಂತಹ ಬ್ಲೇಝರ್ ಡ್ರೆಸ್, ಕೋಟ್ ಡ್ರೆಸ್, ಡಬ್ಬಲ್ ಕೋಟ್ ಜಂಪ್ ಸೂಟ್ಸ್, ಡಬ್ಬಲ್ ಲೇಯರ್ ಡಂಗ್ರೀಸ್, ಟೀ ಶರ್ಟ್ –ಜೀನ್ಸ್ ಹಾಗೂ ಜಾಕೆಟ್ ಪ್ಯಾಂಟ್, ಟೈಟ್ ಪ್ಯಾಂಟ್ ಮೇಲೆ ಶರ್ಟ್ –ಕ್ರಾಪ್ ಜಾಕೆಟ್, ಫುಲ್ ಸ್ಲೀವ್ ಜಾಕೆಟ್ ಸೆಟ್‌ನಂತಹ ನಾನಾ ಬಗೆಯ ಔಟ್‌ಫಿಟ್‌ಗಳು ಚಾಲ್ತಿಯಲ್ಲಿವೆ.


ಮಕ್ಕಳಿಗೂ ಮಿಕ್ಸ್ ಮ್ಯಾಚ್ ಫ್ಯಾಷನ್
ಇನ್ನು, ಮಿಕ್ಸ್ ಮ್ಯಾಚ್ ಫ್ಯಾಷನ್ ಅಪ್ಷನ್‌ನಲ್ಲಿ, ಟಾಪ್, ಸ್ಕರ್ಟ್, ಅದರ ಮೇಲೊಂದು ಕ್ರಾಪ್ ಜಾಕೆಟ್, ಕಾಲಿಗೆ ಸ್ಟಾಕಿನ್ಸ್, ಇನ್ನು ಪುಟ್ಟದಾದ ಡೆನಿಮ್ ಫ್ರಾಕ್ ಮೇಲೊಂದು ಫುಲ್ ಸ್ಲೀವ್ ಕಾಲರ್ ಜಾಕೆಟ್‌ಗಳು ಚಾಲ್ತಿಯಲ್ಲಿವೆ. ಇಂಡೋ-ವೆಸ್ಟರ್ನ್ ಕಿಡ್‌ವೇರ್‌ಗಳಲ್ಲಿ ಸೆಮಿ ಎಥ್ನಿಕ್ ಲುಕ್ ನೀಡುವ ತ್ರಿಬಲ್ ಲೇಯರ್ಡ್‌ನ ಅಂಬ್ರೆಲ್ಲಾ-ಸಿಂಡ್ರೆಲ್ಲಾ ಲಾಂಗ್ ಫ್ರಾಕ್-ಗೌನ್‌ಗಳು, ಗಂಡು ಮಕ್ಕಳಿಗೆ ತ್ರಿ ಪೀಸ್ ಫಾರ್ಮಲ್ ಸೂಟ್ ಸೆಟ್‌ಗಳು ಪ್ರಚಲಿತದಲ್ಲಿವೆ.

ಇನ್ನು, ಡೈಲಿ ಬಳಸುವ ಔಟ್‌ಫಿಟ್‌ಗಳಲ್ಲಿ ಫುಲ್ ಸ್ಲೀವ್, ತ್ರೀ ಫೋರ್ತ್, ಫ್ರಿಲ್, ಫ್ಲೇರ್ ಫ್ರಾಕ್‌ಗಳು ಟ್ರೆಂಡ್‌ನಲ್ಲಿವೆ. ಡಬ್ಬಲ್ ಲೈನಿಂಗ್ ಇರುವಂತಹ ಔಟ್‌ಫಿಟ್ಸ್, ಮಲ್ಟಿ ಲೇಯರ್ಡ್ ಔಟ್‌ಫಿಟ್ಸ್ ಪಾರ್ಟಿವೇರ್‌ಗಳಲ್ಲಿ ಕಾಣಿಸಿಕೊಂಡಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.
ಈ ಸುದ್ದಿಯನ್ನೂ ಓದಿ | Suryakanti Jumki Fashion: ಹುಡುಗಿಯರನ್ನು ಸೆಳೆದ 3 ಬಗೆಯ ಸೂರ್ಯಕಾಂತಿ ಜುಮಕಿಗಳಿವು
ಚಳಿಗಾಲದ ಕಿಡ್ಸ್‌ವೇರ್ ಆಯ್ಕೆ ಹೀಗಿರಲಿ
- ಚಳಿಗಾಲದ ಕಿಡ್ಸ್‌ವೇರ್ ಫ್ಯಾಬ್ರಿಕ್ ದಪ್ಪನಾಗಿರಲಿ.
- ಮಕ್ಕಳಿಗೆ ಬೆಚ್ಚಗಿಡುವ ನೆಪದಲ್ಲಿ ತೀರಾ ಬಿಗಿಯಾದ ಉಸಿರುಕಟ್ಟಿಸುವ ಔಟ್‌ಫಿಟ್ ಆಯ್ಕೆ ಬೇಡ.
- ಮೊದಲು ಮಕ್ಕಳ ಕಂಫರ್ಟಬಲ್‌ಗೆ ಆದ್ಯತೆ ನೀಡಿ.
- ಕಾರ್ಟೂನ್ ಇರುವಂತಹ ಲೇಯರ್ಡ್ ಪ್ರಿಂಟ್ಸ್ ಡಿಸೈನರ್‌ವೇರ್‌ಗಳು ಮಕ್ಕಳಿಗೆ ಖುಷಿ ನೀಡುತ್ತವೆ.
- ಗಂಡು ಮಕ್ಕಳಿಗೆ ಫುಲ್ ಸ್ಲೀವ್ ಟೀ ಶರ್ಟ್, ಸ್ಟ್ರೇಟ್ ಕಟ್ ಜೀನ್ಸ್ ಜತೆಗೆ ಜಾಕೆಟ್/ಬ್ಲೇಜರ್ ಪ್ರಿಫರ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)