Wednesday, 14th May 2025

Pralhad Joshi: ನಕಲಿ ಗಾಂಧಿಗಳ ಪಾದ ನೆಕ್ಕಿದವರು ಬಿ.ಕೆ. ಹರಿಪ್ರಸಾದ್: ಜೋಶಿ ತಿರುಗೇಟು

Pralhad Joshi

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ (B K Hariprasad), ನಕಲಿ ಗಾಂಧಿಗಳ ಪಾದ ನೆಕ್ಕಿದವರು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕಿಡಿ ಕಾರಿದ್ದಾರೆ. “ಪ್ರಲ್ಹಾದ್‌ ಜೋಶಿ ಇವತ್ತಿಗೂ ಗೋಡ್ಸೆ ಪೂಜೆ ಮಾಡುತ್ತಾರೆ” ಎಂಬ ಹರಿಪ್ರಸಾದ್ ಹೇಳಿಕೆಗೆ ಜೋಶಿ ತಿರುಗೇಟು ಕೊಟ್ಟರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಈಗಿನ ಕಾಂಗ್ರೆಸ್‌ನಲ್ಲಿ ಇರೋರೆಲ್ಲಾ ನಕಲಿ ಗಾಂಧಿಗಳು. ಇಂಥ ನಕಲಿ ಗಾಂಧಿಗಳ ಪಾದ ನೆಕ್ಕುವ ಹರಿಪ್ರಸಾದ್, ನಮ್ಮ ಬಗ್ಗೆ ಹೇಳೋದೇನು ಎಂದು ಅವರು ತರಾಟೆ ತೆಗೆದುಕೊಂಡರು.

ಹರಿಪ್ರಸಾದ್ ಮೊದಲು ತಮ್ಮ ಯೋಗ್ಯತೆಯನ್ನು ಅರಿಯಲಿ. ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಚಡ್ಡಿ-ನಿಕ್ಕರ್ ಬಗ್ಗೆ ಮಾತನಾಡಿದ್ರು, ಆಗಲೇ ಸಿಎಂ ಇವರನ್ನು ಹೊರ ಹಾಕಲು ತಯಾರಾಗಿದ್ದರು ಎಂದು ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ರಾಜ್ಯ ಸರ್ಕಾರದಿಂದ ಆರ್ಥಿಕ ನಿರ್ವಹಣೆ ವೈಫಲ್ಯ; ಪ್ರಲ್ಹಾದ್‌ ಜೋಶಿ

ಸಿದ್ದರಾಮಯ್ಯ ನಿಕ್ಕರ್ ಹಾಕಲ್ಲ ಎಂದೆಲ್ಲ ಹೇಳಿದಂಥ ಈ ವ್ಯಕ್ತಿ ಇದೀಗ ಸಿಎಂ ಪರ ಧ್ವನಿ ಎತ್ತುತ್ತಿದ್ದಾರೆ. ಬಹುಶಃ ಸಿಎಂ ನಾಲ್ವರನ್ನು ತೆಗೆದು ಹಾಕಿ ಹರಿಪ್ರಸಾದ್‌ಗೆ ಸಚಿವ ಸ್ಥಾನ ಕೊಡುವುದಾಗಿ ಹೇಳಿರಬೇಕು? ಎಂದು ಪ್ರಲ್ಹಾದ್‌ ಜೋಶಿ ಚೇಡಿಸಿದರು.

ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ನೋಡಿಕೊಳ್ಳಲಿ

ಕಾಂಗ್ರೆಸ್ ನಾಯಕರು ಹೀಗೆಲ್ಲ ಮಾತನಾಡುತ್ತಲೇ ದೇಶದಲ್ಲಿ ತಿರಸ್ಕೃತಗೊಳ್ಳುತ್ತಿದ್ದಾರೆ. ಬಿ.ಕೆ.ಹರಿಪ್ರಸಾದ್ ಮೊದಲು ದೇಶದಲ್ಲಿ ತಮ್ಮ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ನೋಡಿಕೊಳ್ಳಲಿ ಎಂದು ಸಚಿವರು ವಾಗ್ದಾಳಿ ನಡೆಸಿದರು.

ಬಿಜೆಪಿ ಎಲ್ಲರಿಗೂ ಸಮಾನ ಗೌರವವನ್ನೇ ಕೊಡುತ್ತಿದೆ

ಬಿಜೆಪಿ ಯಾವತ್ತೂ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರಂಥ ಮಹಾನ್ ನಾಯಕರನ್ನು ಅತ್ಯಂತ ಗೌರವದಿಂದಲೇ ಕಾಣುತ್ತಿದೆ. ಎಲ್ಲರಿಗೂ ಸಮಾನ ಗೌರವವನ್ನೇ ಕೊಡುತ್ತಿದೆ. ಬಿಜೆಪಿ ಅಸಲಿ ಗಾಂಧಿಗಳಿಗೆ, ಗಾಂಧಿವಾದಿಗಳಿಗೆ ಯಾವತ್ತೂ ಗೌರವ ನೀಡುತ್ತದೆ. ನಕಲಿ ಗಾಂಧಿಗಳಿಗಲ್ಲ ಎಂದು ಹೇಳಿದರು.

ಮಹಾತ್ಮ ಗಾಂಧಿ ಅವರನ್ನು ಪ್ರಧಾನಿ ಮೋದಿ ಆದಿಯಾಗಿ ಬಿಜಿಪಿಯ ಪ್ರತಿಯೊಬ್ಬರೂ ಅತ್ಯಂತ ಗೌರವದಿಂದಲೇ ನೋಡುತ್ತಾರೆ. ಈ ಅಸಲಿ ಗಾಂಧಿಯವರ ಜೀವನಧಾರೆಗಳನ್ನು ಸ್ವತಃ ಮೋದಿ ಅವರೂ ಅನುಸರಿಸುತ್ತಿದ್ದಾರೆ ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | PM Internship Scheme: ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು; ಇಂದೇ ಶುರು

ಅಂಬೇಡ್ಕರ್‌ಗೆ ಕಾಂಗ್ರೆಸ್ ಏನು ಗೌರವ ಕೊಟ್ಟಿದೆ?

ದಲಿತರ ನಾಯಕ, ಸಂವಿಧಾನ ಶಿಲ್ಪಿ, ಮಹಾನ್ ಗಾಂಧಿವಾದಿಯೂ ಆಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಏನು ಗೌರವ ಕೊಟ್ಟಿದೆ? ಭಾರತ ರತ್ನ ಸಹ ಕೊಡಲಿಲ್ಲ ಎಂದು ಟೀಕಿಸಿದರು.