Saturday, 10th May 2025

Children Kidnap: ಬೆಳಗಾವಿಯಲ್ಲಿ ಹಾಡ ಹಗಲೇ ಇಬ್ಬರು ಮಕ್ಕಳ ಕಿಡ್ನಾಪ್;‌ ವಿಡಿಯೋ ವೈರಲ್‌

children kidnap

ಬೆಂಗಳೂರು: ಇದು ಚಿಕ್ಕಮಕ್ಕಳ ತಂದೆ-ತಾಯಿ ನಿಜಕ್ಕೂ ಭಯಭೀತರಾಗುವಂಥ ಘಟನೆ. ಉದ್ಯಮಿಯೊಬ್ಬರ ಇಬ್ಬರು ಮಕ್ಕಳು ಆಟವಾಡುತ್ತಿದ್ದ ವೇಳೆ ಮನೆಯೊಳಗಿಂದಲೇ ಕಿಡ್ನಾಪ್ (children kidnap case) ಆಗಿರುವ ಭಯಾನಕ ಘಟನೆ ನಡೆದಿದೆ. ಈ ಘಟನೆ ಕರ್ನಾಟಕದ ಬೆಳಗಾವಿಯಿಂದ (Belagavi news) ವರದಿಯಾಗಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (viral video) ಆಗುತ್ತಿದ್ದು, ಆತಂಕ ಮೂಡಿಸಿದೆ. ಇಬ್ಬರು ಪುರುಷರು ಮನೆಯೊಳಗೆ ನುಗ್ಗಿ ಮೂರು ಮತ್ತು ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಓಡುತ್ತಿರುವುದನ್ನು ದೃಶ್ಯಾವಳಿಗಳು ತೋರಿಸಿವೆ.

ಆ ವ್ಯಕ್ತಿಗಳು ಅವರನ್ನು ಅಪಹರಿಸಿದಾಗ ಇಬ್ಬರೂ ತಮ್ಮ ತಾಯಿಯೊಂದಿಗೆ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕಾರರು ಅವರ ಮನೆಗೆ ನುಗ್ಗುವ ಮೊದಲು ಇಬ್ಬರೂ ಮಕ್ಕಳು ಶಿಶುವಿಹಾರದಿಂದ ಹಿಂತಿರುಗಿದ್ದರು. ಇಬ್ಬರು ದುಷ್ಕರ್ಮಿಗಳು ಮಕ್ಕಳನ್ನು ಕಾಯುತ್ತಿದ್ದ ಕಾರಿನೊಳಗೆ ಹಾಕಿಕೊಂಡು ವೇಗವಾಗಿ ಚಲಾಯಿಸಿದ್ದಾರೆ.

ಮಕ್ಕಳ ಪತ್ತೆಗೆ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ತಂದೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ.

ಇದನ್ನೂ ಓದಿ: Terror Attack: ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯೋಧ ಶವವಾಗಿ ಪತ್ತೆ