Saturday, 10th May 2025

Tumkur News: ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲುಗೆ ʼಸುಸ್ಥಿರ ಅಭಿವೃದ್ಧಿಗಾಗಿ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿʼ

Tumkur News

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಅವರು ʼಸುಸ್ಥಿರ ಅಭಿವೃದ್ಧಿಗಾಗಿ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿʼ ಗೆ ಭಾಜನರಾಗಿದ್ದಾರೆ. (Tumkur News) ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರಿಗೆ ನವದೆಹಲಿಯ ಇಂಟರ್‌ ನ್ಯಾಷನಲ್ ಅಸೋಸಿಯೇಷನ್ ಆಫ್ ಎಜುಕೇಟರ್ಸ್ ಫಾರ್ ವರ್ಲ್ಡ್ ಪೀಸ್ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಕಾಲಜಿ ಅಂಡ್ ಎನ್ವಿರಾನ್‌ಮೆಂಟ್ ಈ ಪ್ರಶಸ್ತಿಯನ್ನು ನೀಡುತ್ತಿದೆ.

ಈ ಸುದ್ದಿಯನ್ನೂ ಓದಿ | IPPB Recruitment 2025: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ವಿವಿಧ ಹುದ್ದೆ; ಇಂದೇ ಅರ್ಜಿ ಸಲ್ಲಿಸಿ

ಡಿ.29ರಂದು ನವದೆಹಲಿಯಲ್ಲಿ ನಡೆದ 20ನೇ ಜಾಗತಿಕ ವಿಶ್ವ ಶಾಂತಿ ಕಾಂಗ್ರೆಸ್‌ನಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಅವರು ʼಸುಸ್ಥಿರ ಅಭಿವೃದ್ಧಿಗಾಗಿ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿʼ ಸ್ವೀಕರಿಸಿದರು.