Saturday, 10th May 2025

Tumkur News: ಅಂತಾರಾಜ್ಯ ಬೈಕ್‌ ಕಳ್ಳರ ಬಂಧನ; 31 ದ್ವಿಚಕ್ರ ವಾಹನಗಳ ವಶ

Tumkur News

ಪಾವಗಡ: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ 42 ಲಕ್ಷ ರೂ ಮೌಲ್ಯದ 31 ಬೈಕ್‌ಗಳನ್ನು ಪಾವಗಡ ಠಾಣಾ ಪೊಲೀಸರು ವಶಪಡಿಸಿಕೊಂಡಿರುವ ಘಟನೆ (Tumkur News) ನಡೆದಿದೆ. ಆಂಧ್ರಪ್ರದೇಶ ರಾಜ್ಯದ ಸತ್ಯಸಾಯಿ ಜಿಲ್ಲೆಯ ಪೆನುಗೊಂಡ ತಾಲೂಕಿನ ಮಾವತ್ತೂರು ಗ್ರಾಮದ ಹರೀಶ್, ಅದೇ ತಾಲೂಕಿಗೆ ಸೇರಿದ ಮ್ಯಾಕಲಪಲ್ಲಿ ಗ್ರಾಮದ ಮನೋಹರ್ ಮತ್ತು ಜಾನಕಂಪಲ್ಲಿ ಗ್ರಾಮದ ಸಾಯಿ ಪವನ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Gubbi News: ನಾಡ ಬಂದೂಕು ಮಾರಾಟ; ಗುಬ್ಬಿಯಲ್ಲಿ 6 ಮಂದಿ ಬಂಧನ

ಬಂಧಿತ ಮೂವರು ಆರೋಪಿಗಳು ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ವಿವಿಧೆಡೆ ಕಳವು ಮಾಡಿದ್ದ 42 ಲಕ್ಷ ಮೌಲ್ಯದ ಒಟ್ಟು 31 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್ಪಿ ಕೆ.ವಿ. ಅಶೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.