ತುಮಕೂರು: ತಾಲೂಕಿನ ವಿವಿಧೆಡೆ ಅಡಿಕೆ ಕಳ್ಳತನ ಮಾಡುತ್ತಿದ್ದ (Theft Case) ಪ್ರಸನ್ನ ಕುಮಾರ್ (40) ಎಂಬ ಆರೋಪಿಯನ್ನು ಹೆಬ್ಬೂರು ಠಾಣಾ ಪೊಲೀಸರು ಬಂಧಿಸಿ, ಆತನಿಂದ ಸುಮಾರು 800 ಕೆ.ಜಿ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ. ಅ.28ರಂದು ಕೋಡಿಹಳ್ಳಿಯಲ್ಲಿ ಶೆಟ್ಟಳ್ಳಯ್ಯ ಎಂಬುವವರಿಗೆ ಸೇರಿದ 4 ಚೀಲ ಅಡಿಕೆ, ಮೃತ್ಯುಂಜಯ ಕುಮಾರ್ ಎಂಬುವರು ಶೆಡ್‌ನಲ್ಲಿ ಸಂಗ್ರಹಿಸಿಟ್ಟಿದ್ದ 16 ಚೀಲ ಅಡಿಕೆ ಕಳುವಾಗಿತ್ತು. ಈ ಕುರಿತು ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗೆ ಪತ್ತೆಗಾಗಿ ರಚಿಸಿದ್ದ ವಿಶೇಷ ತಂಡ ರಚಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನ.22ರಂದು ವಿದ್ಯುತ್ ವ್ಯತ್ಯಯ
ಡಿವೈಎಸ್‌ಪಿ ಕೆ.ಆರ್.ಚಂದ್ರಶೇಖರ್, ಕ್ಯಾತ್ಸಂದ್ರ ಸಿಪಿಐ ರಾಮಪ್ರಸಾದ್, ಹೆಬ್ಬೂರು ಠಾಣೆಯ ಪಿಎಸ್‌ಐ ಜಿ.ಎಸ್. ಬೈರೇಗೌಡ, ಸಿಬ್ಬಂದಿ ಸಿದ್ದರಾಜು, ಸುರೇಶ್, ಪುಟ್ಟರಾಜು, ಬಸವರಾಜು, ವಿರೂಪಾಕ್ಷ ಪಾಟೀಲ ಅವರ ತಂಡ ಕಾರ್ಯಾಚರಣೆ ನಡೆಸಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.