Saturday, 10th May 2025

Star Saree Fashion: ಸೀರೆಯಲ್ಲಿ ಗ್ಲಾಮರ್ ಡಾಲ್‌ನಂತೆ ಕಾಣಿಸುವ ನಟಿ ಸಂಗೀತಾ ಭಟ್ ಫ್ಯಾಷನ್ ಮಂತ್ರ ಹೀಗಿದೆ

Star Saree Fashion

ಸಂದರ್ಶನ: ಶೀಲಾ ಸಿ. ಶೆಟ್ಟಿ

ಸೀರೆಯಲ್ಲೂ ಗ್ಲಾಮರ್ ಡಾಲ್‌ನಂತೆ ಕಾಣಿಸುವ ಸ್ಯಾಂಡಲ್‌ವುಡ್ ನಟಿ ಸಂಗೀತಾ ಭಟ್ (Star Saree Fashion) ಸಖತ್ ಫ್ಯಾಷೆನಬಲ್ ನಟಿ & ಮಾಡೆಲ್. ಸೀರೆಯಲ್ಲಿ ಮಾತ್ರವಲ್ಲ, ಎಲ್ಲಾ ಬಗೆಯ ಔಟ್‌ಫಿಟ್‌ಗಳಲ್ಲೂ ಸಖತ್ತಾಗಿ ಕಾಣಿಸುತ್ತಾರೆ. ಮಾತ್ರವಲ್ಲ, ಅಷ್ಟೇ ಚೆನ್ನಾಗಿ ತಮ್ಮದೇ ಆದ ಸ್ಟೈಲ್ ಸ್ಟೇಟ್‌ಮೆಂಟ್ಸ್ ಕೂಡ ಫಾಲೋ ಮಾಡುತ್ತಾರೆ.

ಸೀರೆ ಫ್ಯಾಷನ್ & ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ ನಟಿ ಸಂಗೀತಾ ಭಟ್ ತಮ್ಮ ಸೀರೆ ಒಲವಿನ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಓದುಗರಿಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ. ಅವರ ಸಂದರ್ಶನದ ಸಾರಾಂಶ ಇಲ್ಲಿದೆ.

ಸಂಗೀತಾ ಭಟ್, ಸ್ಯಾಂಡಲ್‌ವುಡ್ ನಟಿ

ವಿಶ್ವವಾಣಿ ನ್ಯೂಸ್: ಸೀರೆಯಲ್ಲಿ ಗ್ಲಾಮರ್ ಡಾಲ್‌ನಂತೆ ಕಾಣಿಸುವ ನಿಮ್ಮ ಸೀರೆ ಲವ್ ಬಗ್ಗೆ ಹೇಳಿ?

ಸಂಗೀತಾ ಭಟ್: ಮದುವೆಯಾದ ಆರಂಭದಲ್ಲಿ ಹೆವ್ವಿ ರೇಷ್ಮೆ ಸೀರೆಗಳನ್ನು ಉಟ್ಟುಕೊಳ್ಳುವುದು ಕಷ್ಟವೆನಿಸುತ್ತಿತ್ತು. ಆಗೆಲ್ಲಾ ಸೀರೆಯೆಂದರೇ ದೂರ ಇರುತ್ತಿದ್ದ ನಾನು ಬರಬರುತ್ತಾ ಸೀರೆಯನ್ನು ಇಷ್ಟಪಡಲಾರಂಭಿಸಿದೆ. ಅದರಲ್ಲೂ ಮೃದುವಾದ ಮಲ್ ಕಾಟನ್ ಸೀರೆ ನನಗೆ ಪ್ರಿಯವಾಗತೊಡಗಿತು. ಸೀರೆಯುಡಲಾರಂಭಿಸಿದೆ. ಪರಿಣಾಮ, ಸೀರೆ ಲವ್ ಹೆಚ್ಚಾಯಿತು.

ವಿಶ್ವವಾಣಿ ನ್ಯೂಸ್: ನಿಮ್ಮ ಡೈಲಿ ರುಟೀನ್‌ನಲ್ಲಿರುವ ಫ್ಯಾಷನ್ ಏನು?

ಸಂಗೀತಾ ಭಟ್: ಕಂಫರ್ಟಬಲ್ ವೇರ್ಸ್ ನನ್ನ ವಾರ್ಡ್ರೋಬ್‌ನಲ್ಲಿವೆ. ನಿಮಗೆ ಗೊತ್ತೇ! ನನ್ನ ಪತಿ ಸುದರ್ಶನ್ ಧರಿಸಿ, ಲೂಸಾಗಿರುವ ಟೀ ಶರ್ಟ್ & ಔಟ್‌ಫಿಟ್‌ಗಳನ್ನು ನಾನು ಮನೆಯಲ್ಲಿ ಧರಿಸುತ್ತೇನೆ ಎಂದರೇ ನಿಮಗೆ ಅಚ್ಚರಿಯಾಗಬಹುದು!

ವಿಶ್ವವಾಣಿ ನ್ಯೂಸ್: ಫೋಟೋಶೂಟ್‌ಗಳಲ್ಲಿ ನಿಮ್ಮ ಸೀರೆ ಚಾಯ್ಸ್ ಹೇಗೆ?

ಸಂಗೀತಾ ಭಟ್: ಬಹುತೇಕ ಸೀರೆ ಸ್ಟೈಲಿಂಗ್ ಹಾಗೂ ಆಯ್ಕೆ ನನ್ನ ಐಡಿಯಾವೇ ಆಗಿರುತ್ತದೆ. ಇದರೊಂದಿಗೆ ಮೇಕಪ್ ಹಾಗೂ ಫೋಟೋಗ್ರಾಫಿ ಟೀಮ್ ಸಪೋರ್ಟ್ ಕೂಡ ಅತ್ಯುತ್ತಮ ಔಟ್‌ಫುಟ್ ದೊರೆಯಲು ಸಹಾಯ ಮಾಡುತ್ತದೆ.

ವಿಶ್ವವಾಣಿ ನ್ಯೂಸ್: ಸೀರೆ ಪ್ರೇಮಿಯಾಗಿರುವ ನೀವು ಸೀರೆಗಳ ಬಗ್ಗೆ ಹೇಳುವುದೇನು?

ಸಂಗೀತಾ ಭಟ್: ಸೀರೆ ಕೂಡ ನಮ್ಮ ಎಮೋಷನ್ ಬಿಂಬಿಸಬಲ್ಲದು. ತೀರಾ ಮೃದುವಾದ ಮಲ್ ಕಾಟನ್ ಅಥವಾ ಸಿಲ್ಕ್ ಸೀರೆಗಳು ಪ್ರತಿ ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅದನ್ನು ನಾವು ಸ್ಟೈಲಿಂಗ್ ಮಾಡುವುದರ ಆಧಾರದ ಮೇಲೆ ಅವು ಗ್ಲಾಮರಸ್ ಆಗಿ ಕಾಣಿಸುತ್ತವೆ. ನನಗದು ಸಿದ್ಧಿಸಿದೆ.

ವಿಶ್ವವಾಣಿ ನ್ಯೂಸ್: ನಿಮ್ಮ ಯೂನಿಕ್ ಫ್ಯಾಷನ್?

ಸಂಗೀತಾ ಭಟ್: ಯೂನಿಕ್ ಫ್ಯಾಷನ್ ಎಂಬುದಿಲ್ಲ! ನಾನು ನಾನಾಗಿದ್ದಾಗ ನನ್ನ ಬಾಡಿ ಟೈಪ್‌ಗೆ ಹೊಂದುವಂತೆ ಫ್ಯಾಷನ್ ಮಾಡಿದಾಗ ಅದು ಯೂನಿಕ್ ಫ್ಯಾಷನ್ ಆಗುತ್ತದೆ ಅಲ್ಲವೇ!

ವಿಶ್ವವಾಣಿ ನ್ಯೂಸ್: ಸೀರೆಯಲ್ಲೂ ಕನಸು ಕಾಣುತ್ತೀರಾ?

ಸಂಗೀತಾ ಭಟ್: ಹೌದು, ಚಿಕ್ಕವಳಿದ್ದಾಗಿನಿಂದಲೂ ಕರಣ್ ಜೋಹರ್ ಸಿನಿಮಾ ನೋಡಿ ಬೆಳೆದ ನನಗೆ ಸ್ನೋ ಫಾಲ್ ಜಾಗದಲ್ಲಿ ಬಾಲಿವುಡ್ ನಾಯಕಿಯರಂತೆ, ನಾನು ಕೂಡ ಸೀರೆಯಲ್ಲಿ ಉಟ್ಟು, ಗಾಳಿಯಲ್ಲಿ ಸೆರಗು ಹಾರಿಸುತ್ತಾ, ಹಾಡೊಂದರಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸಿದೆ.

ಈ ಸುದ್ದಿಯನ್ನೂ ಓದಿ | Feather Accessories Fashion: ಯುವತಿಯರನ್ನು ಸೆಳೆಯುತ್ತಿದೆ ಫಂಕಿ ಫೆದರ್ ಆಕ್ಸೆಸರೀಸ್!

ವಿಶ್ವವಾಣಿ ನ್ಯೂಸ್: ಓದುಗರಿಗೆ ಫ್ಯಾಷನ್ ಟಿಪ್ಸ್ ನೀಡುತ್ತೀರಾ?

ಸಂಗೀತಾ ಭಟ್: ಸದಾ, ಕಂಫರ್ಟಬಲ್ ಫ್ಯಾಷನ್ ಫಾಲೋ ಮಾಡಿ. ಅವರಿವರ ಫ್ಯಾಷನ್ ಫಾಲೋ ಮಾಡಬೇಡಿ. ನಿಮ್ಮ ಬಾಡಿ ಟೈಪ್‌ಗೆ ತಕ್ಕಂತೆ ಫ್ಯಾಷನ್ ಫಾಲೋ ಮಾಡಿ. ಚಳಿಗಾಲದಲ್ಲೂ ಲೈಟ್ ಕಾಟನ್ ಸೀರೆ ಆಯ್ಕೆ ಮಾಡಿ. ಉಡಿ. ಆಕರ್ಷಕವಾಗಿ ಕಾಣಿಸುವಿರಿ.

(ಲೇಖಕಿ ಫ್ಯಾಷನ್ ಪತ್ರಕರ್ತೆ)