Monday, 12th May 2025

Star Fashion: ಹೈ ಕಾಲರ್‌ ಬ್ಲೌಸ್‌ ಲಂಗ-ದಾವಣಿಯಲ್ಲಿ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ದೇಸಿ ಲುಕ್‌!

Star Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪ್ರಿಂಟೆಡ್‌ ಡಿಸೈನರ್‌ ಲಂಗ-ದಾವಣಿಯಲ್ಲಿ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ (Shweta Chengappa) ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಹೈ ಕಾಲರ್‌ ನೆಕ್‌ಲೈನ್‌ ಹೊಂದಿರುವ ಪ್ರಿಂಟೆಡ್‌ ಬ್ಲೌಸ್‌ನ ಡಿಸೈನರ್‌ ಲಂಗ-ದಾವಣಿಯಲ್ಲಿ ಪಕ್ಕಾ ದೇಸಿ ಹುಡುಗಿಯಂತೆ ಫ್ಯಾಷನ್‌ (Star Fashion) ಪ್ರಿಯರನ್ನು ಆಕರ್ಷಿಸಿದ್ದಾರೆ. ಅವರು ಧರಿಸಿರುವ ಈ ಪ್ರಿಂಟೆಡ್‌ ಪರ್ಪಲ್‌ ಶೇಡ್‌ನ ಲಂಗ-ಬ್ಲೌಸ್‌ ಹಾಗೂ ರೆಡ್‌ ಶೇಡ್‌ನ ದಾವಣಿ ಅವರನ್ನು ಮತ್ತಷ್ಟು ರಂಗು ರಂಗಾಗಿಸಿದೆ.

ಶ್ವೇತಾ ಚೆಂಗಪ್ಪ, ನಟಿ, ನಿರೂಪಕಿ

ಪ್ರಿಂಟೆಡ್‌ ಲಂಗ-ದಾವಣಿ ಕಮಾಲ್‌

ಈ ಎಥ್ನಿಕ್‌ವೇರ್‌, ಅದರಲ್ಲೂ ಪಕ್ಕಾ ಕರ್ನಾಟಕ ಹುಡುಗಿಯರು ಧರಿಸುವಂತಹ ಸಾಮಾನ್ಯ ಲಂಗ-ದಾವಣಿಯನ್ನು, ಪ್ರಿಂಟೆಡ್‌ ಫ್ಯಾಬ್ರಿಕ್‌ನಲ್ಲಿ ಡಿಸೈನ್‌ ಮಾಡಿಸಿದಾಗ ಹೀಗೂ ಸುಂದರವಾಗಿ ಕಾಣಿಸಬಹುದು ಎಂಬುದನ್ನು ಶ್ವೇತಾ ತೋರ್ಪಡಿಸಿದ್ದಾರೆ. ಅವರ ಈ ಕಂಪ್ಲೀಟ್‌ ಲುಕ್‌ ಮುಂಬರುವ ಹಬ್ಬದ ಸೀಸನ್‌ನ ಉಡುಗೆಗಳ ಆಯ್ಕೆಗೆ ಅದರಲ್ಲೂ ದೇಸಿ ಫ್ಯಾಷನ್‌ಗೆ ಯುವತಿಯರು ಆಯ್ಕೆ ಮಾಡಿಕೊಳ್ಳುವಂತಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ಪ್ರಿಂಟೆಡ್‌ ಲಂಗ-ದಾವಣಿ ವಿಶೇಷತೆ ಏನು?

ಅಂದ ಹಾಗೆ, ಸಾದಾ ಅಥವಾ ಬಾರ್ಡರ್‌ನ ಲಂಗ-ದಾವಣಿಗಳು ಮೊದಲಿನಿಂದಲೂ ಚಾಲ್ತಿಯಲ್ಲಿವೆ. ಪ್ರಿಂಟೆಡ್‌ ಲಂಗ-ದಾವಣಿಗಳು ಕೂಡ ಪ್ರಚಲಿತದಲ್ಲಿವೆ. ಆದರೆ, ಅವು ಕೇವಲ ಫ್ಲೋರಲ್‌ ಪ್ರಿಂಟ್ಸ್‌ನಲ್ಲಿದ್ದವು. ಇನ್ನು ಶ್ವೇತಾ ಧರಿಸಿರುವ ಈ ಔಟ್‌ಫಿಟ್‌ ಡಾರ್ಕ್‌ ಬ್ಲ್ಯೂಯಿಶ್‌ ಪರ್ಪಲ್‌ ಶೇಡ್‌ನ ಫ್ಯಾಬ್ರಿಕ್‌ ತುಂಬೆಲ್ಲಾ ಚಿತ್ತಾರ ಮೂಡಿವೆ. ಈ ವಿನ್ಯಾಸ ಇಡೀ ಔಟ್‌ಫಿಟ್ಟನ್ನು ಹೈ ಲೈಟ್‌ ಆಗಿಸಿದೆ. ಅಲ್ಲದೇ, ಈ ಎಥ್ನಿಕ್‌ವೇರ್‌ನ ವಿಶೇಷತೆ ಎಂದರೇ, ಬ್ಲೌಸ್‌ ಹೈ ಕಾಲರ್‌ ನೆಕ್‌ಲೈನ್‌ ಹೊಂದಿದೆ. ಇದು ಅತ್ಯಾಕರ್ಷಕವಾಗಿ ಅವರನ್ನು ಬಿಂಬಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಈ ಸುದ್ದಿಯನ್ನೂ ಓದಿ | New Fashion: ಮ್ಯಾಗ್ನೆಟಿಕ್‌ ಸ್ಟಡ್ಸ್‌, ಇಯರ್‌ ರಿಂಗ್ಸ್; ಹೊಸ ಜನರೇಶನ್ ಹುಡುಗರ ಮೆಚ್ಚಿನ‌ ಆಯ್ಕೆ!

ನಟಿ ಶ್ವೇತಾ ಚೆಂಗಪ್ಪರಂತೆ ಕಾಣಿಸಲು ಈ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿ

ಪ್ರಿಂಟೆಡ್‌ ಲಂಗ-ದಾವಣಿ ಆಯ್ಕೆ ಮಾಡಿ. ಅದಕ್ಕೆ ಹೊಂದುವ ದಾವಣಿ ಧರಿಸಿ.
ಟ್ರೆಡಿಷನಲ್‌ ಲುಕ್‌ ನೀಡುವ ಮೇಕಪ್‌ ಮಾಡಿ.
ಕಿವಿಗೆ ಬಿಗ್‌ ಜುಮ್ಕಾ ಧರಿಸಿ.
ಹಣೆಗೊಂದು ಆಕರ್ಷಕ ಮ್ಯಾಚಿಂಗ್‌ ಬಿಂದಿ ಇರಿಸಿ.
ಫಿಲ್ಮಿ ಲುಕ್‌ಕಾಗಿ ಸನ್‌ಗ್ಲಾಸ್‌ ಧರಿಸಿ.
ಟ್ರೆಡಿಷನಲ್‌ ಹೇರ್‌ಸ್ಟೈಲ್‌ ಮಾಡಿ.
ಕಾಲರ್‌ ನೆಕ್‌ಲೈನ್‌ ಬ್ಲೌಸ್‌ಗಾದಲ್ಲಿ ಹೆಚ್ಚು ಆಭರಣಗಳ ಅಗತ್ಯ ಇರುವುದಿಲ್ಲ.
ಕಂಪ್ಲೀಟ್‌ ದೇಸಿ ಸ್ಟೈಲಿಂಗ್‌ಗೆ ಪ್ರಾಮುಖ್ಯತೆ ನೀಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)