Monday, 12th May 2025

ಎಸ್‌ಎಸ್ ಎಲ್ ಸಿ ಪರೀಕ್ಷೆ ಮೌಲ್ಯಮಾಪನ ಇಂದಿನಿಂದ

ಬೆಂಗಳೂರು : ಎಸ್‌ಎಸ್ ಎಲ್ ಸಿ ಪರೀಕ್ಷೆ ಮೌಲ್ಯಮಾಪನ ಇಂದಿನಿಂದ ಆರಂಭವಾಗಲಿದ್ದು, ಮೇ.12 ಕ್ಕೆ ಎಸ್‌ಎಸ್ ಎಲ್ ಸಿ ಪ್ರಕಟವಾಗಲಿದೆ ಎಂದು ಎಸ್‌ಎಸ್‌ಎಲ್ ಸಿ ಬೋರ್ಡ್ ಮಾಹಿತಿ ನೀಡಿದೆ.

ಇಂದಿನಿಂದ ಎಸ್‌ಎಸ್ ಎಲ್ ಸಿ ಪರೀಕ್ಷೆ ಮೌಲ್ಯಮಾಪನ ಆರಂಭವಾಗಲಿದ್ದು, ರಾಜ್ಯದ 234 ಕೇಂದ್ರದಲ್ಲಿ ಮೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಯಾ ಜಿಲ್ಲೆಯ ಡಿಸಿ, ಎಸಿಗಳು ಮೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮೌಲ್ಯಮಾಪನ ಕಾರ್ಯಕ್ಕೆ 63,796 ಶಿಕ್ಷಕರನ್ನು ನಿಯೋಜನೆ ಮಾಡಲಾಗಿದ್ದು, ಮೇ 1 ರಿಂದ ಮೇ.2 ರವರೆಗೆ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಲಿದ್ದು, ಮೇ. 12 ರಂದು ಎಸ್‌ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.