Sunday, 11th May 2025

Srimurali New Movie: ರೋರಿಂಗ್ ಸ್ಟಾರ್ ಶ್ರೀಮುರಳಿ ಜತೆ ಕೈ ಜೋಡಿಸಿದ ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ!

Srimurali New Movie

ಬೆಂಗಳೂರು: ಬಘೀರ ಸಿನಿಮಾ ಮೂಲಕ, ಹಿಟ್ ಪಡೆದ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali New Movie) ಅವರ ಮುಂದಿನ ಸಿನಿಮಾ ಯಾವುದು? ಸದ್ಯಕ್ಕೆ ಈ ಪ್ರಶ್ನೆಗೆ ಇಲ್ಲಿಯವರೆಗೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಇಂದು ಶ್ರೀಮುರಳಿ ಬರ್ತಡೇ ಪ್ರಯುಕ್ತ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಸಿಕ್ಕಿದೆ. ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ‌ ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆಗೆ ಕೈ ಜೋಡಿಸಿದ್ದಾರೆ. ಅಂದರೆ ಈ ಸಂಸ್ಥೆ ನಿರ್ಮಾಣ ಮಾಡಲಿರುವ ಸಿನಿಮಾದಲ್ಲಿ ನಾಯಕನಾಗಿ ಶ್ರೀಮುರಳಿ ನಟಿಸಲಿದ್ದಾರೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾ ನಿರ್ಮಾಣದ ಮೂಲಕ ಕನ್ನಡ ಚಿತ್ರೋದ್ಯಮ ಪ್ರವೇಶಿಸುತ್ತಿದೆ. ಈಗಾಗಲೇ ಕನ್ನಡದ ನಿರ್ಮಾಣ ಸಂಸ್ಥೆಗಳು ಪರಭಾಷೆ ಸಿನಿಮಾ ನಿರ್ಮಾಣದಲ್ಲಿ‌ ತೊಡಗಿವೆ. ಈಗ ಬೇರೆ ಭಾಷೆ ಸಂಸ್ಥೆ ಕನ್ನಡಕ್ಕೆ ಆಗಮಿಸಿದೆ. ಹೀಗೆ ಆಗಮಿಸಿದ್ದು ಖುಷಿಯ ವಿಚಾರವೂ ಹೌದು.

ಬಘೀರ ಸಿನಿಮಾದ ಯಶಸ್ಸಿನ ಬಳಿಕ ಈಗ ಇನ್ನೊಂದು‌ ಮಹೋನ್ನತ ಸಿನಿಮಾದ ಭಾಗವಾಗುತ್ತಿದ್ದಾರೆ ಶ್ರೀಮುರಳಿ. ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳಲ್ಲೂ ಇದು ಕುತೂಹಲ ಮೂಡಿಸಿದೆ.

ಈ ಸುದ್ದಿಯನ್ನೂ ಓದಿ | Winter Torn Jacket Fashion: ವಿಂಟರ್ ಸೀಸನ್‌ನಲ್ಲಿ ಟ್ರೆಂಡಿಯಾದ ವೈವಿಧ್ಯಮಯ ಟೊರ್ನ್ ಜಾಕೆಟ್ಸ್

ಸದ್ಯ‌ ಶ್ರೀಮುರಳಿ ಬರ್ತಡೇಗೆ ಕೈ ಜೋಡಿಸುತ್ತಿರುವ ಬಗ್ಗೆ ಅಧಿಕೃತ ಪೋಸ್ಟರ್ ಬಿಡುಗಡೆ ಆಗಿದೆ. ಈ ಪೋಸ್ಟರ್ ಸಹ ಅಷ್ಟೇ ಎಪಿಕ್ ಆಗಿದೆ. ಶ್ರೀಮುರಳಿ ಕೆರಿಯರ್‌ಗೂ ಈ ಸಿನಿಮಾ ಹೊಸ ಮೈಲಿಗಲ್ಲಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಮುಂದಿನ ದಿನಗಳಲ್ಲಿ ನಿರ್ದೇಶಕರು, ಚಿತ್ರದ ಶೀರ್ಷಿಕೆ, ತಾರಾಗಣ ಮತ್ತು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.