Wednesday, 14th May 2025

ಫೆ.14-ಏ.25 ತನಕ ಕೇರಳ-ಕರ್ನಾಟಕ-ಗುಜರಾತ್ ನಡುವೆ ವಿಶೇಷ ರೈಲು ಸಂಚಾರ

ಮಂಗಳೂರು: ಕೇರಳ-ಕರ್ನಾಟಕ-ಗುಜರಾತ್ ನಡುವೆ ವಿಶೇಷ ರೈಲು ವಾರಕ್ಕೊಮ್ಮೆ ಫೆ.14ರಿಂದ ಏಪ್ರಿಲ್ 25 ತನಕ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇರಳದ ಎರ್ನಾಕುಲಂನಿಂದ ಹೊರಡುವ ರೈಲು ಮಂಗಳೂರು ಮೂಲಕ ಗುಜರಾತ್ ರಾಜ್ಯದ ಓಖಾಗೆ ಸಂಚಾರ ನಡೆಸಲಿದೆ. ರೈಲಿನ ಎಲ್ಲಾ ಸೀಟುಗಳು ಮೀಸಲಿರಿಸಿದ ಆಸನಗಳಾಗಿವೆ. ರೈಲು ನಂಬರ್ 06438 ಎರ್ನಾಕುಲಂ ಜಂಕ್ಷನ್‌ನಿಂದ ಫೆ.14ರಿಂದ ಏಪ್ರಿಲ್ 25ರ ತನಕ ಸಂಚಾರ ನಡೆಸಲಿದೆ. ಪ್ರತಿ ಶನಿವಾರ ಸಂಜೆ 19.35(Railway Timing) ಹೊರಡುವ ರೈಲು ಸೋಮವಾರ ಸಂಜೆ 16.40ಕ್ಕೆ ಓಖಾ ತಲುಪಪಿದೆ.

ರೈಲು ಸಂಖ್ಯೆ 06437 ಫೆಬ್ರವರಿ 17ರಿಂದ ಏಪ್ರಿಲ್ 28ರ ತನಕ ಪ್ರತಿ ಬುಧವಾರ ಬೆಳಗ್ಗೆ 6.45ಕ್ಕೆ ಹೊರಡಲಿದ್ದು, ಗುರುವಾರ ರಾತ್ರಿ 23.55(Railway Timing)ಕ್ಕೆ ಎರ್ನಾಕುಲಂ ತಲುಪಲಿದೆ. ಈ ರೈಲು ಅಲುವಾ, ತ್ರಿಶೂರ್, ಶೋರ್ನೂರು ಜಂಕ್ಷನ್, ಪಟ್ಟಾಂಬಿ, ಕುಟ್ಟಿಪುರಂ, ಪರಪ್ಪನಂಗಡಿ, ಕೋಝಿಕ್ಕೋಡ್, ಕುಯಿಲಾಂಡಿ, ವಡಕ್ಕರ, ಕಣ್ಣೂರು ಪಯ್ಯನೂರು ನಿಲ್ದಾಣದ ಮೂಲಕ ಸಾಗಲಿದೆ.

ಕಾಸರಗೋಡು, ಮಂಗಳೂರು ಜಂಕ್ಷನ್, ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್, ಭಟ್ಕಳ, ಹೊನ್ನಾ ವರ, ಕಾರವಾರ, ಮಡಗಾಂವ್ ಜಂಕ್ಷನ್, ಕಂಕವಲಿ, ರತ್ನಗಿರಿ, ಮನಗಾಂವ್, ಪನ್ವೇಲ್, ಭಿವಂಡಿ ರೋಡ್, ವಸಾಯಿ ರೋಡ್, ವಾಪಿ, ಸೂರತ್, ವಡೋದರಾ ಜಂಕ್ಷನ್, ಆನಂದ್ ಜಂಕ್ಷನ್, ಅಹಮದಾಬಾದ್ ಜಂಕ್ಷನ್, ರಾಜ್ ಕೋಟ್ ಜಂಕ್ಷನ್‌ಗಳಲ್ಲಿ ನಿಲುಗಡೆ ಗೊಳ್ಳಲಿದೆ.

Leave a Reply

Your email address will not be published. Required fields are marked *