ಬಸವನಬಾಗೇವಾಡಿ: ನಾವು ಯಾವುದೇ ಹುದ್ದೆಯಲ್ಲಿದ್ದರು ಸರಿ ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯು ವಂತಿರಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಸಂಗಮೇಶ ಪೂಜಾರಿ ಹೇಳಿದರು.

ತಾಲೂಕ ಆರೋಗ್ಯ ವೈದ್ಯಧಿಕಾರಿ ಶಶಿಧರ ಓತಗೇರಿ ಮಾತನಾಡಿ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಿರಂತರ ಜನರ ಸೇವೆಯಲ್ಲಿ ನಿರತರಾಗಿರುತ್ತವೆ. ಕೋವಿಡ್ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯು ಶಿಕ್ಷಣ ಇಲಾಖೆಯ ಸಹಯೋಗದಿಂದ ಮಹಾಮಾರಿಯನ್ನ ಗೆಲ್ಲಲು ಸಾಧ್ಯವಾಯಿತು. ಸಾರ್ವಜನಿಕ ಬದುಕಿನಲ್ಲಿ ಆರೋಗ್ಯ ಎಷ್ಟು ಮುಖ್ಯವೋ ಶಿಕ್ಷಣವು ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.
ತಹಶೀಲ್ದಾರ ವಿಜಯಕುಮಾರ ಕಡಕೋಳ. ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಪಾಂಡು ರಾಠೋಡ ಮಾತನಾಡಿದರು.
ಮಂಜುನಾಥ ಗುಳೇದಗುಡ್ಡ, ಎಚ್ ಜಿ. ಮಿರ್ಜಿ, ಶಿವಾನಂದ ಮಂಗಾನವರ್, ಉಮೇಶ ಕೌಲಗಿ, ಆರ್ ಎಸ್ ತುಂಗಳ, ಎ ಎಲ್ ಗಂಗೂರ, ಸಿದ್ದಣ್ಣ ಉಕ್ಕಲಿ, ಆರ್ ಎ ನದಾಫ್, ಪಿ.ಬಿ ಕಡಕೋಳ, ಎ ಆರ್ ಗಿಡ್ಡಪ್ಪಗೋಳ, ಶರಣಪ್ಪ ಮಾದರ, ಎಂ.ಬಿ ತೋಟದ,
ಎಸ್ ಜಿ ಪಾಟೀಲ, ಶಾಂತಾ ಬಿ. ವನರೊಟ್ಟಿ, ಎಸ್ ಜಿ. ಮಿಣಜಗಿ ವೇದಿಕೆಯಲ್ಲಿದ್ದರು.
ಶಿಕ್ಷಕ ಎಸ್. ಬಿ. ಬಾಗೇವಾಡಿ. ಎಮ್. ವಿ. ಗಬ್ಬೂರ ಸ್ವಾಗತಿಸಿ ನಿರೂಪಿಸಿದರು.