ಸಂದರ್ಶನ: ಶೀಲಾ ಸಿ. ಶೆಟ್ಟಿ
ಸಿನಿಮಾ, ಫ್ಯಾಷನ್ ಹಾಗೂ ಇತರೆ ಕ್ಷೇತ್ರದ ಬಹುತೇಕ ಸೆಲೆಬ್ರೆಟಿಗಳು ಹಾಗೂ ಗಣ್ಯ ಮಹಿಳೆಯರು ಕೂಡ ಸೀರೆ ಪ್ರೇಮಿಗಳು. ಹೌದು, ಸೀರೆ ದಿನದ ಅಂಗವಾಗಿ ವಿಶ್ವವಾಣಿ ನ್ಯೂಸ್, ಕೆಲವು ಸೆಲೆಬ್ರೆಟಿಗಳನ್ನು ಮಾತನಾಡಿಸಿದಾಗ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವಿವರ.

ತೇಜಸ್ವಿನಿ ಶರ್ಮಾ, ಸ್ಯಾಂಡಲ್ವುಡ್ ನಟಿ
ನನಗೆ ಸೀರೆ ಕಂಫರ್ಟಬಲ್ ಉಡುಗೆ ಎಂದರೆ ಅಚ್ಚರಿಯಾಗಬಹುದು. ಇದು ಫೆಮಿನೈನ್ ಲುಕ್ ನೀಡುವುದರಿಂದ ಬಹುತೇಕ ಎಲ್ಲಾ ಇವೆಂಟ್ಸ್ಗಳಿಗೆ ಉಡುತ್ತೇನೆ. ಡ್ರೈವ್ ಮಾಡುವಾಗಲೂ ಆರಾಮವಾಗಿ ಕ್ಯಾರಿ ಮಾಡುತ್ತೀನಿ.

ಶುಭಾ ರಕ್ಷಾ, ಸ್ಯಾಂಡಲ್ವುಡ್ ನಟಿ
ಚಿಕ್ಕವಳಿದ್ದಾಗಿನಿಂದಲೂ ಸೀರೆ ಇಷ್ಟಪಡುತ್ತಿದ್ದೆ. ಸೀರೆಯುಟ್ಟು ಡ್ಯಾನ್ಸ್ ಮಾಡುತ್ತಿದ್ದೆ. ಸೀರಿಯಲ್ಗಾಗಿ 200-300 ಕ್ಕೂ ಹೆಚ್ಚು ಸಾದಾ ಸೀರೆ ಖರೀದಿಸಿದ್ದೇನೆ. ಇದುವರೆಗೂ ಒಂದು ಸೀರೆಯನ್ನು ರೀಪಿಟ್ ಮಾಡಿಲ್ಲ!

ಶಿಲ್ಪಾ ಮಂಜುನಾಥ್, ಮಿಸ್ ಕರ್ನಾಟಕ & ನಟಿ
ಕಾಲ ಬದಲಾದರೂ ಸೀರೆ ಉಡುವ ಕ್ರೇಝ್ ಹಾಗೂ ಟ್ರೆಂಡ್ ಇಂದಿಗೂ ಬದಲಾಗಿಲ್ಲ ಎಂಬುದು ನನ್ನ ಅನಿಸಿಕೆ. ಸೀರೆಯಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬಹುದು. ಇದಕ್ಕೆ ನಾನೇ ಸಾಕ್ಷಿ!

ಪ್ರತಿಭಾ ಸಂಶೀಮಠ್, ಮಿಸ್ & ಮಿಸೆಸ್ ಇಂಡಿಯಾ ಆಸ್ಟ್ರಾಲ್ ಡೈರೆಕ್ಟರ್
ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್ ಪೇಜೆಂಟ್ಗಳಲ್ಲಿ ಸೀರೆಯುಟ್ಟು, ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಅವಕಾಶ ನನಗೆ ಸಾಕಷ್ಟು ಬಾರಿ ಸಿಕ್ಕಿರುವುದು ಪುಣ್ಯ. ಪ್ರತಿ ಬಾರಿಯೂ ವಿದೇಶಿಗರ ಪ್ರಶಂಸೆಯ ಸುರಿಮಳೆಯಾಗಿದೆ. ನನ್ನ ಪ್ರಕಾರ, ಸೀರೆ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ.

ಲಕ್ಷ್ಮಿ ಕೃಷ್ಣ, ಸೆಲೆಬ್ರೆಟಿ ಫ್ಯಾಷನ್ ಡಿಸೈನರ್
ಆಯಾ ಥೀಮ್ಗೆ ತಕ್ಕಂತೆ, ಆಗಾಗ್ಗೆ ಸಿನಿ ತಾರೆಯರಿಗೆ ಲೆಕ್ಕವಿಲ್ಲದಷ್ಟು ಕಸ್ಟಮೈಸ್ಡ್ ಡಿಫರೆಂಟ್ ಸೀರೆಗಳನ್ನು ಡಿಸೈನ್ ಮಾಡಿರುವುದರ ಜತೆಗೆ ವಿಶೇಷವಾಗಿ, ಚುನಾವಣೆ ಸಮಯದಲ್ಲಿ, ಪ್ರಧಾನಿ ಮೋದಿಯವರ ಚಿತ್ರವಿರುವ ಪ್ರಿಂಟೆಡ್ ಸೀರೆ ಡಿಸೈನ್ ಮಾಡಿದ್ದು, ರಾಷ್ಟ್ರ ಮಟ್ಟದಲ್ಲಿ ಹೆಸರು ತಂದಿದೆ. ಇನ್ನು, ಪ್ರಧಾನಿಯಿಂದಲೇ ಹೊಗಳಿಸಿಕೊಂಡದ್ದು ಮರೆಯಲಾಗದ ಸಂಗತಿ.

ರೂಪ ಮಳಲಿ, ಚಂದ್ರಯಾನ 2 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್ ಡೈರೆಕ್ಟರ್
ನನ್ನ ಬಳಿ ರಾಶಿ ರಾಶಿ ಸೀರೆ ಕಲೆಕ್ಷನ್ ಇಲ್ಲ, ನನಗೆ ರೇಷ್ಮೆ ಸೀರೆಗಳನ್ನು ಉಡುವುದಕ್ಕಿಂತ ಕಂಫರ್ಟಬಲ್ ಎಂದೆನಿಸುವ ಕಾಟನ್ ಸೀರೆಗಳನ್ನು ಉಡುವುದೆಂದರೇ ಖುಷಿಯಾಗುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Winter Neck Scarf Fashion: ವಿಂಟರ್ನಲ್ಲಿ ಕಾರ್ಪೋರೇಟ್ ಯುವತಿಯರ ನೆಕ್ ಸ್ಕಾರ್ಫ್ ಲವ್!