Saturday, 10th May 2025

Reliance: ಕ್ಯಾನ್ಸರ್ ಆರಂಭಿಕ ಪತ್ತೆಗಾಗಿ ಸ್ಟ್ರಾಂಡ್ ಲೈಫ್‌ನಿಂದ ಬೆಂಗಳೂರಿನಲ್ಲಿ ‘ಕ್ಯಾನ್ಸರ್ ಸ್ಪಾಟ್ʼ ಆರಂಭ

Reliance

ಬೆಂಗಳೂರು: ಪ್ರಮುಖ ಜೀನೋಮಿಕ್ಸ್ ಹಾಗೂ ಬಯೋಇನ್ಫರ್ಮ್ಯಾಟಿಕ್ಸ್ ಕಂಪನಿ ಆದ ಸ್ಟ್ರಾಂಡ್ ಲೈಫ್ ಸೈನ್ಸಸ್ (Strand Life Sciences) ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (Reliance Industries Limited) ಅಂಗಸಂಸ್ಥೆಯಾಗಿದೆ. ಹಲವು ಬಗೆಯ ಕ್ಯಾನ್ಸರ್‌ಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದಕ್ಕಾಗಿ ಈ ಕಂಪನಿಯು ರಕ್ತದ ಆಧಾರಿತವಾದ ಪರೀಕ್ಷೆಯನ್ನು ಘೋಷಣೆ ಮಾಡಿದ್ದು ಇದನ್ನು ಕ್ಯಾನ್ಸರ್ ಸ್ಪಾಟ್ (Cancer Spot) ಎಂದು ಕರೆಯಲಾಗಿದೆ. ಈ ಪರೀಕ್ಷೆಗಾಗಿ ಜಾಗತಿಕ ಮಟ್ಟದಲ್ಲಿ ಅಂಗೀಕೃತವಾದ ಮೆಥಿಲೇಷನ್ ಪ್ರೊಫೈಲಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದರ ಮೂಲಕವಾಗಿ ಕ್ಯಾನ್ಸರ್ ಗಡ್ಡೆಯ ಡಿಎನ್ಎ ತುಣುಕುಗಳನ್ನು ಗುರುತಿಸಲಾಗುತ್ತದೆ.

ಕ್ಯಾನ್ಸರ್ ಸ್ಪಾಟ್ ತುಂಬ ಸರಳವಾದ ರಕ್ತದ ಮಾದರಿಗಳನ್ನು ಬಳಸಿಕೊಂಡ ಕಾರ್ಯ ನಿರ್ವಹಿಸುತ್ತದೆ ಮತ್ತು ಮುಖ್ಯ ಜಿನೋಮ್ ಅನುಕ್ರಮವನ್ನು ಬಳಕೆ ಮಾಡುತ್ತದೆ ಹಾಗೂ ರಕ್ತದಲ್ಲಿ ಡಿಎನ್ಎ ಮೆಥಿಲೇಷನ್ ಕುರುಹುಗಳನ್ನು ಗುರುತಿಸುವ ವಿಶ್ಲೇಷಣೆ ಪ್ರಕ್ರಿಯೆಯನ್ನು ಮಾಡುತ್ತದೆ. ಕ್ಯಾನ್ಸರ್ ಸ್ಪಾಟ್ ಕುರುಹುಗಳು ಭಾರತೀಯ ಪದ್ಧತಿಯಿಂದ ವಿಸ್ತೃತಗೊಂಡಿದೆ. ಇದು ತುಂಬ ಬಲವಾಗಿ ಹಾಗೂ ಅನ್ವಯಿಸುವ ದೃಷ್ಟಿಯಿಂದ ಜಾಗತಿಕವಾಗಿ ಎಲ್ಲ ಜನಾಂಗಕ್ಕೂ ಹೊಂದುವಂಥದ್ದಾಗಿದೆ. ಈ ಪರೀಕ್ಷೆಯ ಮೂಲಕವಾಗಿ ತುಂಬ ಸರಳ ಮತ್ತು ಅನುಕೂಲಕರವಾದ ಒಂದೋ ಸ್ವಯಂಪ್ರೇರಿತರಾಗಿ ಅಥವಾ ಸಾಮಾನ್ಯ ಸಂದರ್ಭಗಳಿಗೆ ಕ್ಯಾನ್ಸರ್ ಸ್ಕ್ರೀನಿಂಗ್‌ಗೆ ಆಯ್ಕೆಯನ್ನು ಒದಗಿಸುತ್ತದೆ.

ಈ ಸುದ್ದಿಯನ್ನೂ ಓದಿ | Job Guide: ನ್ಯಾಷನಲ್‌ ಸೀಡ್ಸ್‌ ಕಾರ್ಪೋರೇಷನ್‌ನ 188 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್‌ ಟೇಬಲ್‌

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಂಡಳಿಯ ಸದಸ್ಯೆ ಆಗಿರುವಂಥ ಇಶಾ ಅಂಬಾನಿ ಪಿರಾಮಲ್ ಮಾತನಾಡಿ, ʼಮಾನವೀಯ ಸೇವೆಗಾಗಿ ಔಷಧ ಕ್ಷೇತ್ರದ ಭವಿಷ್ಯವನ್ನು ಮರುರೂಪಿಸುವುದರಲ್ಲಿ ಅತಿ ದೊಡ್ಡ ಪ್ರವರ್ತಕ ಬದಲಾವಣೆ ತರುವುದಕ್ಕೆ ರಿಲಯನ್ಸ್ ಬದ್ಧವಾಗಿದೆ. ಭಾರತದಲ್ಲಿ ಕ್ಯಾನ್ಸರ್ ಎಂಬುದು ಸಾವು ತರುವ ಹಾಗೂ ಬಹಳ ದೊಡ್ಡ ಕಾಯಿಲೆ ಎಂಬ ಆತಂಕಕ್ಕೆ ಕಾರಣವಾಗಿದೆ. ರೋಗಿಗೆ, ಅವರ ಕುಟುಂಬಕ್ಕೆ ಹಾಗೂ ಸಮಾಜದ ಪಾಲಿಗೆ ಅತಿದೊಡ್ಡ ಆರ್ಥಿಕ, ಸಾಮಾಜಿಕ ಹಾಗೂ ಮಾನಸಿಕ ಹೊರೆಯಾಗಿದೆ. ಸ್ಟ್ರಾಂಡ್‌ನಿಂದ ಆರಂಭ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಹಚ್ಚುವ ಪರೀಕ್ಷೆ ಮಾಡಲಿದ್ದು, ಹೀಗೆ ಮಾಡುವುದರಿಂದ ಪರಿವರ್ತನೆ ತರುವ ಆರೋಗ್ಯ ರಕ್ಷಣೆ ಸಲ್ಯೂಷನ್ ಒದಗಿಸುವ ನಮ್ಮ ದೃಷ್ಟಿಕೋನಕ್ಕೆ ಮಾದರಿಯಾಗಿ- ನಿದರ್ಶನವಾಗಿ ಇದೆ. ಆರೋಗ್ಯ ರಕ್ಷಣೆ ಹಾಗೂ ಆರೋಗ್ಯ ಸೇವೆಯಲ್ಲಿ ಮುಂದುವರಿದ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ, ಭಾರತದಲ್ಲಿ ಜನರ ಜೀವನ ಸುಧಾರಿಸುವುದರಲ್ಲಿ, ಅಷ್ಟೇ ಅಲ್ಲ, ಜಗತ್ತಿನ ಉಳಿದ ಕಡೆಗಳಲ್ಲೂ ಇದು ಸಾಧ್ಯವಾಗಬೇಕು ಎಂಬ ನಿಟ್ಟಿನಲ್ಲಿ ಜೀನೋಮಿಕ್ಸ್‌ನ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳುವುದಕ್ಕೆ ಬದ್ಧವಾಗಿದ್ದೇವೆ. ನಮ್ಮ ಪ್ರತಿ ಉಪಕ್ರಮದಲ್ಲೂ ರಿಲಯನ್ಸ್ ತನ್ನ ʼವೀ ಕೇರ್ʼ ಎಂಬ ಕಾರ್ಪೊರೇಟ್ ಸಿದ್ಧಾಂತವನ್ನು ಅನುಷ್ಠಾನಕ್ಕೆ ತರುತ್ತದೆ. ಹೊಸದಾದ ಜೀನೋಮಿಕ್ಸ್ ಡಯಾಗ್ನೋಸ್ಟಿಕ್ಸ್ ಅಂಡ್ ರೀಸರ್ಚ್ ಸೆಂಟರ್ ಇದನ್ನು ಮತ್ತೊಮ್ಮೆ ಪ್ರದರ್ಶಿಸಿದೆʼ ಎಂದು ಹೇಳಿದ್ದಾರೆ.

ಜೀನೋಮಿಕ್ಸ್ ಡಯಾಗ್ನೋಸ್ಟಿಕ್ಸ್ ಅಂಡ್ ರೀಸರ್ಚ್ ಸೆಂಟರ್ ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿ, ಮಾತನಾಡಿದ ಸ್ಟ್ರಾಂಡ್ಸ್ ಲೈಫ್ ಸೈನ್ಸಸ್ ಸಹ ಸಂಸ್ಥಾಪಕರು ಹಾಗೂ ಸಿಇಒ ಡಾ ರಮೇಶ್ ಹರಿಹರನ್, ʼಆರಂಭದಲ್ಲಿನ ಎಚ್ಚರಿಕೆ ಎಂಬುದು ಕ್ಯಾನ್ಸರ್ ಜತೆಗಿನ ಹೋರಾಟದಲ್ಲಿ ಬಹಳ ಮುಖ್ಯವಾದದ್ದು. ಅದನ್ನು ಗೆಲ್ಲಬೇಕು. ಕ್ಯಾನ್ಸರ್‌ಗಿಂತ ಒಂದು ಹೆಜ್ಜೆ ಮುಂದೆ ಇರುವುದಕ್ಕೆ ನಮಗೆ ಅನುವು ಮಾಡಿಕೊಡುವಂಥ ಕ್ಯಾನ್ಸರ್ ಆರಂಭಿಕ ಪತ್ತೆ ಪರೀಕ್ಷೆಯು ಸಹಾಯ ಮಾಡುತ್ತದೆ. ಇಪ್ಪತ್ನಾಲ್ಕು ವರ್ಷಕ್ಕೂ ಹೆಚ್ಚಿನ ಅವಧಿಯ ಇತಿಹಾಸದಿಂದಾಗಿ ಸ್ಟ್ರಾಂಡ್ ಜೀನೋಮಿಕ್ಸ್‌ನಲ್ಲಿ ಮುಂಚೂಣಿಯಲ್ಲಿದೆ. ಹಲವು ವರ್ಷಗಳ ಕಠಿಣ ಅಧ್ಯಯನದ ಫಲವಾಗಿ ಭಾರತದಲ್ಲಿಯೇ ಇದು ಮೊದಲು ಎನಿಸಿಕೊಂಡಿದೆʼ ಎಂದಿದ್ದಾರೆ.

ಈ ಜೀನೋಮಿಕ್ಸ್ ಡಯಾಗ್ನೋಸ್ಟಿಕ್ಸ್ ಅಂಡ್ ರೀಸರ್ಚ್ ಸೆಂಟರ್ ಕ್ಯಾನ್ಸರ್ ಸ್ಪಾಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ. ಹೊಸ ಸಲ್ಯೂಷನ್ ಅಭಿವೃದ್ಧಿಪಡಿಸುವುದರಲ್ಲಿ ಶ್ರಮಕ್ಕೆ ವೇಗ, ಸಂಶೋಧನಾ ಪ್ರಯತ್ನಕ್ಕೆ ಬೆಂಬಲ ನೀಡುತ್ತದೆ. ಇದರೊಂದಿಗೆ ಭಾರತೀಯರು ಹಾಗೂ ಭಾರತ ಬಿಟ್ಟು ಜಗತ್ತಿನ ಎಲ್ಲೆಡೆ ಇರುವವರಿಗೆ ಜೀವ ಉಳಿಸುವ ಔಷಧ ಮತ್ತು ಚಿಕಿತ್ಸೆ ಒದಗಿಸುತ್ತದೆ.

ಜೀನೋಮಿಕ್ಸ್ ಮತ್ತು ಬಯೋಫಿಸಿಕಲ್ ರಸಾಯನಶಾಸ್ತ್ರದಲ್ಲಿ ಜಾಗತಿಕ ತಜ್ಞ ಡಾ. ಚಾರ್ಲ್ಸ್ ಕ್ಯಾಂಟರ್ ಅವರು ಡಿಸೆಂಬರ್ 2ರಂದು ಸೋಮವಾರ ಜೀನೋಮಿಕ್ಸ್ ಡಯಾಗ್ನೋಸ್ಟಿಕ್ಸ್ ಅಂಡ್ ರೀಸರ್ಚ್ ಸೆಂಟರ್ ಅನ್ನು ಉದ್ಘಾಟಿಸಿದರು. ಅವರು ಈ ಹಿಂದೆ ಕೊಲಂಬಿಯಾ ವಿಶ್ವವಿದ್ಯಾನಿಲಯ, ಯುಸಿ ಬರ್ಕ್ಲಿ, ಮತ್ತು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. ಇದೇ ಜೀನೋಮಿಕ್ಸ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಪಡೆದಂಥ ಇತರ ಗಣ್ಯರ ಜತೆಗೆ ಕೆಲಸ ಮಾಡಿದ ಅನುಭವ ಅವರಿಗಿದೆ.

ಈ ಸುದ್ದಿಯನ್ನೂ ಓದಿ | Karnataka Rain: ಬಿರುಗಾಳಿ ಸಹಿತ ಭಾರಿ ಮಳೆ; ನಾಳೆ ರಾಜ್ಯದ 9 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌, ಮೀನುಗಾರರಿಗೆ ಎಚ್ಚರಿಕೆ!

ಅಂದ ಹಾಗೆ ಈ ಕೇಂದ್ರವು 33,000 ಚದರ ಅಡಿಯಲ್ಲಿ ವ್ಯಾಪಿಸಿದ್ದು, ಅತ್ಯಾಧುನಿಕ ಜೀನೋಮಿಕ್ಸ್ ಪ್ರಯೋಗಾಲಯದ ಜತೆಗೆ ಇತ್ತೀಚಿನ ಅನುಕ್ರಮ ತಂತ್ರಜ್ಞಾನಗಳು ಮತ್ತು ಕೆಲಸದ ಹರಿವುಗಳ (ವರ್ಕ್ ಫ್ಲೋ) ನಡುವೆ ಬಯೋಇನ್ಫರ್ಮ್ಯಾಟಿಕ್ಸ್ ತಜ್ಞರು, ಮಾಲಿಕ್ಯುಲರ್ ಜೀವಶಾಸ್ತ್ರಜ್ಞರು ಮತ್ತು ಕ್ಲಿನಿಕಲ್ ತಂಡಗಳ ಮಧ್ಯೆ ಸಹಯೋಗ ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಕ್ಯಾನ್ಸರ್ ಸ್ಪಾಟ್ ಬಗ್ಗೆ ಹೆಚ್ಚು ಮಾಹಿತಿಗಾಗಿ, https://strandls.com/early-detection ಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.