ಮುಂಬೈ: ಜಿಯೋ ಪೇಮೆಂಟ್ಸ್ ಬ್ಯಾಂಕ್‌ನಿಂದ (Reliance Jio) ಹಬ್ಬದ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ, ಡಿ. 25 ರಿಂದ ಮತ್ತು ಡಿ. 31ನೇ ತಾರೀಕಿನ ಮಧ್ಯೆ ಹೊಸದಾಗಿ ಉಳಿತಾಯ ಖಾತೆಯನ್ನು ತೆರೆಯುವ ಗ್ರಾಹಕರಿಗೆ ರೂ. 5,000 ಮೌಲ್ಯದ ರಿವಾರ್ಡ್ಸ್ ನೀಡಲಿದೆ.
ಈ ರಿವಾರ್ಡ್‌ನಲ್ಲಿ ಮೆಕ್ ಡೊನಾಲ್ಡ್ಸ್ (McDonald’s), ಈಸ್ ಮೈಟ್ರಿಪ್ (EaseMyTrip) ಮತ್ತು ಮ್ಯಾಕ್ಸ್ ಫ್ಯಾಷನ್ (Max Fashion) ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಕೂಪನ್‌ಗಳು ಸೇರಿವೆ. ಬ್ಯಾಂಕ್ ತನ್ನ ಡಿಜಿಟಲ್-ಫಸ್ಟ್ ವಿಧಾನಕ್ಕೆ ಖ್ಯಾತಿ ಪಡೆದಿದ್ದು, ಐದು ನಿಮಿಷಗಳಲ್ಲಿ ಗ್ರಾಹಕರಿಗೆ ಉಳಿತಾಯ ಖಾತೆಯನ್ನು ತೆರೆಯುತ್ತದೆ.
ಈ ಸುದ್ದಿಯನ್ನೂ ಓದಿ | Christmas Princess Look 2024: ಕ್ರಿಸ್‌ಮಸ್ ಸೆಲೆಬ್ರೇಷನ್‌ಗಾಗಿ ಬಂತು ಪ್ರಿನ್ಸೆಸ್ ಲುಕ್ ನೀಡುವ ಗೌನ್ಸ್!
ಜಿಯೋ ಪೇಮೆಂಟ್ಸ್ ಬ್ಯಾಂಕ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಬಯೋಮೆಟ್ರಿಕ್ ಆಧಾರಿತ ದೃಢೀಕರಣ, ವರ್ಚುವಲ್ ಮತ್ತು ಭೌತಿಕ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳು ಮತ್ತು ತಡೆರಹಿತ ಬ್ಯಾಂಕಿಂಗ್ ಅನುಭವ ಒಳಗೊಂಡಿವೆ. ಈ ಹಬ್ಬದ ಋತುವಿನಲ್ಲಿ, ಜಿಯೋ ಪೇಮೆಂಟ್ಸ್ ಬ್ಯಾಂಕ್ ತನ್ನ ಅತ್ಯಾಕರ್ಷಕ ರಿವಾರ್ಡ್ಸ್ ಮೂಲಕ ಹೊಸ ಗ್ರಾಹಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.