Monday, 12th May 2025

Rajyotsava In America: ಕಲಾ ದಂಪತಿ ವಿಕ್ರಮ್ ಸೂರಿ, ನಮಿತ ರಾವ್‌ರಿಂದ ಅಮೆರಿಕ ಕನ್ನಡಿಗರೊಂದಿಗೆ ವಿಭಿನ್ನ ಕಾರ್ಯಕ್ರಮ

Rajyotsava In America

ಬೆಂಗಳೂರು: ಕಲಾ ದಂಪತಿಯಾದ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಅವರು ಇತ್ತೀಚಿಗೆ “ಅಕ್ಕ ಸಮೇಳನ” ಮುಗಿಸಿ ಬಂದ ಬಳಿಕ ಮತ್ತೊಮ್ಮೆ ಅಮೇರಿಕ ಕನ್ನಡಿಗರೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು (Rajyotsava In America) ನೀಡಲಿದ್ದಾರೆ.

ಇದೇ ನ.11ರಂದು ಪ್ರಯಾಣ ಬೆಳೆಸಲಿರುವ ಕಲಾ ದಂಪತಿಯಾದ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಅವರು, ಡಿಸೆಂಬರ್ ಅಂತ್ಯದವರೆವಿಗೂ ಅಮೆರಿಕದ ಹಲವು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.

ʼಕರೋಲಿನ ಕನ್ನಡ ಬಳಗʼ, Charlotte. ʼಸಂಪಿಗೆ ಟ್ರಯಂಗಲ್ ಕನ್ನಡ ಅಸೋಸಿಯೇಷನ್ʼ,Raleigh. ʼಸಂಗಮ Pittsburgh ಕನ್ನಡ ಕೂಟʼ ಅವರಿಗಾಗಿ ನೃತ್ಯ ರೂಪಕ ದಶಾವತಾರ, ಮೋಹಿನಿಭಸ್ಮಾಸುರ, ಪುಣ್ಯಕೋಟಿ ಮತ್ತು ಹಾಸ್ಯ ನಾಟಕ Lockout ಅಲ್ಲ knockout ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ನೀಡಲಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ; 10 ಲಕ್ಷ ರೂ. ಬಹುಮಾನ ಗೆಲ್ಲಿ!

ಜತೆಗೆ ಸ್ಥಳೀಯ ಪ್ರತಿಭೆಗಳಿಗೆ ನಾಟಕದ ಅಭಿನಯ ಹಾಗೂ ವಿವಿಧ ನೃತ್ಯ ಪ್ರಕಾರಗಳೊಂದಿಗೆ 8 ವರ್ಷದ ಮಕ್ಕಳಿಂದ ಹಿಡಿದು 45 ವರ್ಷದ ಕನ್ನಡಿಗರು ಒಳಗೊಂಡು ರಂಗವಿನ್ಯಾಸ ಹಾಗೂ ಬೆಳಕು ಸಂಯೋಜನೆ ಮಾಡುವಲ್ಲಿಯೂ ತರಬೇತಿ ನೀಡಲಿದ್ದಾರೆ.