Thursday, 15th May 2025

Printed Kurta Fashion 2024: ಸೀಸನ್‌‌‌ನಲ್ಲಿ ಟ್ರೆಂಡಿಯಾಗಿರುವ 3 ಶೈಲಿಯ ಪ್ರಿಂಟೆಡ್‌ ಕುರ್ತಾಗಳಿವು

Printed Kurta Fashion 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಮ್ಮರ್‌ಗೆ ಸೀಮಿತವಾಗಿದ್ದ, ಪ್ರಿಂಟೆಡ್‌ ಕುರ್ತಾಗಳು (Printed Kurta Fashion 2024) ಇದೀಗ ಹೊಸ ರೂಪದಲ್ಲಿ ಈ ಸೀಸನ್‌ನಲ್ಲೂ ಕಾಲಿಟ್ಟಿದ್ದು, ಯುವತಿಯರನ್ನು ಸೆಳೆಯುತ್ತಿದೆ. ಹೌದು, ಪ್ರತಿ ಬಾರಿಯಂತೆ ಈ ಬಾರಿಯು ನಾನಾ ಬಗೆಯ ಕುರ್ತಾಗಳು, ಫ್ಯಾಷನ್‌ಲೋಕದಲ್ಲಿ ಆಗಮಿಸಿದ್ದು, ಅವುಗಳಲ್ಲಿ ಫ್ರೆಶ್‌ ಲುಕ್‌ ನೀಡಲು ಸಹಕಾರಿಯಾಗುವಂತಹ ನಾನಾ ಡಿಸೈನ್‌ನ ಹಾಗೂ ಪ್ರಿಂಟ್ಸ್‌ನ ಕುರ್ತಾಗಳು ಟ್ರೆಂಡಿಯಾಗಿವೆ. ಮನೋಲ್ಲಾಸ ತುಂಬುವಂತಹ ಡಿಸೈನ್ಸ್ ಹಾಗೂ ವೆರೈಟಿ ಕಲರ್‌ಗಳಲ್ಲಿ ಮಹಿಳೆಯರ ಮನಸೆಳೆದಿವೆ ಎನ್ನುತ್ತಾರೆ ಮಾರಾಟಗಾರರಾದ ಲಕ್ಷಣ್‌ ಹಾಗೂ ಫ್ರಭಾ.

ಚಿತ್ರಗಳು: ಪಿಕ್ಸೆಲ್‌

ಟ್ರೆಂಡಿಯಾಗಿರುವ ಪ್ರಿಂಟ್ಸ್

ಅಂದಹಾಗೆ, ಈ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿರುವ ಫ್ಲೋರಲ್‌, ಟ್ರಾಪಿಕಲ್‌ ಹಾಗೂ ಶೈನಿಂಗ್‌ ಫ್ಲೋರಲ್‌ ಪ್ರಿಂಟ್ಸ್‌ನ ಕುರ್ತಾಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ ಟಾಮ್‌. ಅವರ ಪ್ರಕಾರ, ಇವು ಮನಸ್ಸಿಗೆ ಮುದ ನೀಡುವ ಹೂವುಗಳ ಚಿತ್ತಾರ, ಉಲ್ಲಾಸಿತಗೊಳಿಸುವ ಕಣ್ಮನ ಸೆಳೆಯುವ ಹಸಿರ ಸಿರಿ, ಊಹೆಗೂ ಮೀರಿದ ಶೈನಿಂಗ್‌ ಫ್ಯಾಬ್ರಿಕ್‌ನಲ್ಲಿನ ಹೂವಿನ ಅಲಂಕಾರವನ್ನು ಒಳಗೊಂಡಿವೆ ಎನ್ನುತ್ತಾರೆ.

ಫ್ಲೋರಲ್‌ ಪ್ರಿಂಟೆಡ್‌ ಕುರ್ತಾಗಳು

ದೇಸಿ ಹಾಗೂ ವಿದೇಶಿ ಹೂಗಳು ಸೇರಿದಂತೆ ಬಗೆ ಬಗೆಯ ಹೂವುಗಳ ಚಿತ್ತಾರವನ್ನು ಒಳಗೊಂಡಿರುವ ಫ್ಲವರ್‌ ಪ್ರಿಂಟ್ಸ್‌ನ ಕುರ್ತಾಗಳು ಎಂತಹವರನ್ನು ಆಕರ್ಷಕವಾಗಿಸುತ್ತವೆ. ಅಲ್ಲದೇ, ಯಂಗ್‌ ಲುಕ್‌ ನೀಡುತ್ತವೆ. ಇನ್ನು, ದೊಡ್ಡ ಆಕಾರದ ಹೂ ಬಳ್ಳಿಗಳ ಪ್ರಿಂಟ್ಸ್ ಇರುವ ಕುರ್ತಾಗಳು ಉದ್ದಗಿರುವವರಿಗೆ ಆಕರ್ಷಕವಾಗಿ ಕಾಣಿಸುತ್ತವೆ. ಚಿಕ್ಕ ಚಿಕ್ಕ ಹೂಗಳಿರುವ ಪ್ರಿಂಟೆಡ್‌ ಕುರ್ತಾಗಳು ಪ್ಲಂಪಿಯಾಗಿರುವವರಿಗೆ ಹಾಗೂ ಕುಳ್ಳಗಿರುವವರಿಗೆ ಒಪ್ಪುತ್ತವೆ ಎನ್ನುತ್ತಾರೆ ಡಿಸೈನರ್‌ ರಾಶಿ.

ಟ್ರಾಪಿಕಲ್‌ ಪ್ರಿಂಟೆಡ್‌ ಕುರ್ತಾಗಳು

ಹಸಿರ ಸಿರಿ ಹೊಂದಿರುವ ನಾನಾ ಬಣ್ಣಗಳಲ್ಲಿ ಮೇಳೈಸಿರುವ, ಟ್ರಾಪಿಕಲ್‌ ಪ್ರಿಂಟ್ಸ್‌ ಕ್ರೇಜ್‌ ಯಾವ ಮಟ್ಟಿಗೆ ಹೆಚ್ಚಾಗಿದೆ ಎಂದರೇ, ವಿವಾಹಿತರು ಕೂಡ ಅತಿ ಹೆಚ್ಚಾಗಿ ಇವುಗಳಿಗೆ ಮನಸೋಲತೊಡಗಿದ್ದಾರೆ.

ಶೈನಿಂಗ್‌ ಫ್ಲೋರಲ್‌ ಪ್ರಿಂಟೆಡ್‌ ಕುರ್ತಾಗಳು

ಬಾಲಿವುಡ್‌ ಸ್ಟಾರ್‌ಗಳ ಫೇವರಿಟ್‌ ಪ್ರಿಂಟೆಡ್‌ ಕುರ್ತಾಗಳಿವು. 80 ರ ದಶಕದ ಬಾಲಿವುಡ್‌ ಟ್ರೆಂಡ್‌ ನೆನಪಿಸುವ ಈ ರೆಟ್ರೊ ಲುಕ್‌ ನೀಡುವ ಪಾರ್ಟಿವೇರ್‌ ಕುರ್ತಾಗಳಿವು. ಲಾಂಗ್‌ ಸಿಲ್ಕ್‌, ಜರ್ಸಿ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತವೆ. ಫ್ಯಾಬ್ರಿಕ್‌ನ ಶೈನಿಂಗ್‌ನಿಂದಾಗಿ ನೋಡುಗರಿಗೆ ಲಕ್ಷುರಿ ಫೀಲ್‌ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ತ್ರಿವೇದಿ.

ಈ ಸುದ್ದಿಯನ್ನೂ ಓದಿ | Star Fashion: ಬ್ಲ್ಯಾಕ್‌ ಬ್ಲೇಜರ್‌ ಸೂಟ್‌ ಫ್ಯಾಷನ್‌‌‌ಗೆ ಸೈ ಎಂದ ನಟ ವಿನಯ್‌ ಗೌಡ!

ಪ್ರಿಂಟೆಡ್‌ ಕುರ್ತಾ ಪ್ರಿಯರಿಗೆ ಟಿಪ್ಸ್

  • ಪ್ರಿಂಟೆಡ್‌ ಕುರ್ತಾಗಳಿಗೆ ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.
  • ಮೆಸ್ಸಿ ಹೇರ್‌ಸ್ಟೈಲ್‌ ಬೇಡ. ಸಿಂಪಲ್‌ ಹೇರ್‌ಸ್ಟೈಲ್‌ ಸಾಕು!
  • ಸಿಂಪಲ್‌ ಮೇಕಪ್‌ ಎಲಿಗೆಂಟ್‌ ಲುಕ್‌ ನೀಡುತ್ತದೆ.
  • ಪರ್ಸನಾಲಿಟಿಗೆ ತಕ್ಕಂತೆ ಕುರ್ತಾ ಆಯ್ಕೆ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)