Sunday, 11th May 2025

Pralhad Joshi: ಎಫ್‌ಸಿಐನಿಂದ 10,700 ಕೋಟಿ ರೂ. ಇಕ್ವಿಟಿಗೆ ಕೇಂದ್ರ ಸರ್ಕಾರದ ಅನುಮೋದನೆ: ಜೋಶಿ ಮಾಹಿತಿ

Pralhad Joshi

ನವದೆಹಲಿ: ಭಾರತೀಯ ಆಹಾರ ನಿಗಮದಿಂದ (FCI) 2024-25 ರಲ್ಲಿ ದುಡಿಯುವ ಬಂಡವಾಳಕ್ಕಾಗಿ 10,700 ಕೋಟಿ ರೂ. ಇಕ್ವಿಟಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ನವದೆಹಲಿಯಲ್ಲಿ ಇಂದು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

2024-25 ರಲ್ಲಿ ವೇಸ್ ಅಂಡ್ ಮೀನ್ಸ್ ಅಡ್ವಾನ್ಸ್ ಅನ್ನು ಇಕ್ವಿಟಿಗೆ ಪರಿವರ್ತಿಸುವ ಮೂಲಕ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ 10,700 ಕೋಟಿ ರೂ. ಇಕ್ವಿಟಿಯ ಇನ್ಫ್ಯೂಷನ್ ಅನ್ನು ಕ್ಯಾಬಿನೆಟ್ ಅನುಮೋದಿಸಿದೆ ಎಂದು ತಿಳಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) ಅನುಮೋದಿಸಿದ್ದು, ಕೃಷಿ ಕ್ಷೇತ್ರ ಬಲಪಡಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ಸುದ್ದಿಯನ್ನೂ ಓದಿ | R Ashok: ಅಬಕಾರಿ ಸಚಿವ ತಿಮ್ಮಾಪುರರಿಂದ ವಾರಕ್ಕೆ 18 ಕೋಟಿ ರೂ. ಹಫ್ತಾ ವಸೂಲಿ! ಆರ್‌. ಅಶೋಕ್‌ ಆರೋಪ

1964 ರಲ್ಲಿ 100 ಕೋಟಿ ಮತ್ತು ಇಕ್ವಿಟಿ 4 ಕೋಟಿ ರೂ. ಅಧಿಕೃತ ಬಂಡವಾಳದೊಂದಿಗೆ ಪ್ರಾರಂಭವಾದ ಎಫ್‌ಸಿಐ ಕಾಲಕ್ರಮೇಣ ತನ್ನ ಕಾರ್ಯಾಚರಣೆ ವಿಸ್ತರಿಸಿಕೊಂಡಿದ್ದು, ಪರಿಣಾಮ ಅಧಿಕೃತ ಬಂಡವಾಳ 11,000 ಕೋಟಿ ರೂ. ಇದ್ದದ್ದು ಫೆಬ್ರವರಿ 2024 ರಲ್ಲಿ 21,000 ಕೋಟಿ ಆಗಿದೆ. ಎಫ್‌ಸಿಐ ಯ ಇಕ್ವಿಟಿ ರೂ. 2019-20 ರ ಹಣಕಾಸು ವರ್ಷದಲ್ಲಿ 4,496 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದರು.

2023-24 ರ ಹಣಕಾಸು ವರ್ಷದಲ್ಲಿ 10,157 ಕೋಟಿ ರೂ. ಇತ್ತು. ಈಗ ಗಮನಾರ್ಹ ಮೊತ್ತವಾಗಿ 10,700 ಕೋಟಿ ರೂ. ಇಕ್ವಿಟಿ ಮೂಲಕ ಆರ್ಥಿಕ ಬಲ ನೀಡುವ ಜತೆಗೆ ಹಲವು ಕಾರ್ಯ ಚಟುವಟಿಕೆಗಳಿಗೆ ಉತ್ತೇಜನ ಸಹ ನೀಡಿದೆ ಎಂದು ಸಚಿವ ಜೋಶಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | PM Vidyalaxmi Scheme: ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವ ಪಿಎಂ ವಿದ್ಯಾಲಕ್ಷ್ಮೀ ಯೋಜನೆಗೆ ಅನುಮೋದನೆ; ಅರ್ಜಿ ಸಲ್ಲಿಸುವುದು ಹೇಗೆ?

ಆಹಾರ ಬೆಲೆ ಸ್ಥಿರತೆಗೆ ಆದ್ಯತೆ

ಕನಿಷ್ಟ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ವಿತರಣೆ ಮತ್ತು ಮಾರುಕಟ್ಟೆಯಲ್ಲಿ ಆಹಾರ ಧಾನ್ಯದ ಬೆಲೆ ಸ್ಥಿರಗೊಳಿಸುವ ಮೂಲಕ ಆಹಾರ ಭದ್ರತೆ ಕಲ್ಪಿಸುವಲ್ಲಿ ಎಫ್‌ಸಿಐ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಎಂಎಸ್‌ಪಿ-ಆಧಾರಿತ ಸಂಗ್ರಹಣೆ ಮತ್ತು ಎಫ್‌ಸಿಐ ಯ ಕಾರ್ಯಾಚರಣೆ ಸಾಮರ್ಥ್ಯಗಳಲ್ಲಿನ ಹೂಡಿಕೆಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಇದು ಪ್ರತಿಪಾದಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.