Saturday, 10th May 2025

Physical Abuse: ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಕಿರುಕುಳ ಕೊಡುತ್ತಿದ್ದ ಶಾಲೆ ಮಾಲೀಕ ಅರೆಸ್ಟ್

Physical abuse

ಬೆಂಗಳೂರು: ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕಿತ್ತನಹಳ್ಳಿಯ ವಿಭಾ ಇಂಟರ್‌ ನ್ಯಾಷನಲ್ ಶಾಲೆಯ ಮಾಲೀಕ ಈರತ್ತಯ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಹೆಣ್ಣುಮಕ್ಕಳಿಗೆ ಪದೇಪದೆ ಲೈಂಗಿಕ ಕಿರುಕುಳ (Physical Abuse) ನೀಡಿದ ಆರೋಪ ಈತನ ವಿರುದ್ಧ ಕೇಳಿ ಬಂದಿದೆ.

ವಿದ್ಯಾರ್ಥಿನಿಯರನ್ನು ತನ್ನ ಕ್ಯಾಬಿನ್‌ಗೆ ಕರೆಸಿಕೊಂಡು ಅಂಗಾಂಗ ಮುಟ್ಟಿ ಶಾಲಾ ಮಾಲೀಕ ವಿಕೃತಿ ತೋರುತ್ತಿದ್ದ ಎನ್ನಲಾಗಿದೆ. ಅಲ್ಲದೆ ಶಾಲಾ ಬಸ್‌ನಲ್ಲಿ ಹಿಂದಿ ಸೀಟ್‌ಗೆ ಕರೆಸಿಕೊಂಡು ಕಿರುಕುಳ ನೀಡಿದ್ದ ಎಂಬ ಆರೋಪವಿದೆ. ಈ ಬಗ್ಗೆ ನೊಂದ ವಿದ್ಯಾರ್ಥಿನಿಯರು ದೂರು ದಾಖಲಿಸಿದ್ದು, ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಮಾಲೀಕನ ವಿಕೃತಿ ಬಗ್ಗೆ ವಿವರಿಸಿದ ವಿದ್ಯಾರ್ಥಿನಿ

ನಾನು ವಿಭಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಓದುತ್ತಿದ್ದೇನೆ. ಕಳೆದ 4 ತಿಂಗಳಿನಿಂದ ನಮ್ಮ ಶಾಲೆಯ ಸೆಕ್ರೆಟರಿಯಾದ ಈರತ್ತಯ್ಯ, ಒಬ್ಬಳನ್ನೇ ಅವರ ಕ್ಯಾಬಿನ್‌ಗೆ ಕರೆಸಿಕೊಂಡು ನನ್ನ ತುಟಿಗೆ ಮುತ್ತು ಕೊಟ್ಟರು. ಬಳಿಕ ನನ್ನ ಬಳಿ ಪೀರಿಯಡ್ಸ್ ಮತ್ತು ದೇಹದ ಅಂಗಾಂಗಗಳ ಬಗ್ಗೆ ಅಸಹ್ಯವಾಗಿ ಮಾತನಾಡಿದರು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಹೆದರಿಸಿದ್ದರಿಂದ ಎಲ್ಲವನ್ನು ಸಹಿಸಿಕೊಂಡಿದ್ದೆ ಎಂದಿದ್ದಾಳೆ.

ಸುಮಾರು 2 ತಿಂಗಳ ಹಿಂದೆ ನನ್ನನ್ನು ಅವರ ಕ್ಯಾಬಿನ್‌ಗೆ ಕರೆಸಿಕೊಂಡು ನಿನಗೊಂದು ಉದಾಹರಣೆ ಕೂಡಲೇ ಎಂದು ಕೇಳಿದರು. ನಾನು ಹೇಳಿ ಎಂದೆ, ಅದಕ್ಕೆ ಈರತ್ತಯ್ಯರವರು ನನಗೆ ಆಸೆಯಾಗಿ ನಿನ್ನ ಕರೆದರೆ ಬರುತ್ತೀಯಾ ಎಂದು ಕೇಳಿದರು. ಅಷ್ಟೇ ಅಲ್ಲದೇ ನಿನಗೆ ಅಪ್ಪನ ಪ್ರೀತಿ ಬೇಕಾ ಇಲ್ಲ, ನನ್ನ ಪ್ರೀತಿ ಬೇಕಾ ಎಂದು ಕೇಳಿದ್ದಾರೆ. ಆಗಾಗ ಸ್ಪೆಷಲ್ ಕ್ಲಾಸ್ ಭಾನುವಾರದ ವೇಳೆ ಕ್ಯಾಬಿನ್‌ಗೆ ಕರೆದು ಮತ್ತು ಬಸ್‌ನಲ್ಲಿ ಲಾಸ್ಟ್ ಸೀಟಿಗೆ ಕರೆದುಕೊಂಡು ಹೋಗಿ ಮುತ್ತು ಕೊಡುವುದು ಮತ್ತು ಅಂಗಾಂಗಗಳನ್ನು ಅಸಭ್ಯವಾಗಿ ಮುಟ್ಟುವುದು ಮಾಡುತ್ತಿದ್ದರು. ಇವರು ನಮ್ಮ ಶಾಲೆಯ ಮಾಲೀಕರು ಎಂದು ಅವರಿಗೆ ಭಯಪಟ್ಟು ಸುಮ್ಮನಾಗಿದ್ದೆ ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ.

ಅಷ್ಟೇ ಅಲ್ಲದೆ ಈರತ್ತಯ್ಯ ಹೆಣ್ಣು ಮಕ್ಕಳ ಎದೆ ಭಾಗ ಮುಟ್ಟಿ ಹಣ್ಣುಗಳಿಗೆ ಹೋಲಿಕೆ ಮಾಡಿ ವರ್ಣನೆ ಮಾಡುತ್ತಿದ್ದ ಎನ್ನಲಾಗಿದೆ. ಮಾಲೀಕನ ಅಸಭ್ಯ ವರ್ತನೆ ಬಗ್ಗೆ ಶಿಕ್ಷಕರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಮಾದನಾಯಕನಹಳ್ಳಿಯ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | ISKCON: ʻಬಾಂಗ್ಲಾದೇಶದಲ್ಲಿ ಇಸ್ಕಾನ್‌ ಅನ್ನು ಬ್ಯಾನ್‌ ಮಾಡಿ, ಇಲ್ಲ ಭಕ್ತರನ್ನು ಕೊಲ್ಲುತ್ತೇವೆʼ-ಇಸ್ಲಾಂ ಸಂಘಟನೆಗಳಿಂದ ಎಚ್ಚರಿಕೆ!

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧ; ಕಲಬುರಗಿಯಲ್ಲಿ ಹೀನ ಕೃತ್ಯ!

ಕಲಬುರಗಿ: 15 ವರ್ಷದ ಬಾಲಕಿಯ ಮೇಲೆ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣ ಪಟ್ಟಣದಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯ ಮೇಲೆ ವೃದ್ಧ ಹೀನ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಗೋರಕ್ ನಾಥ ಚೌವ್ಹಾಣ (65) ಆರೋಪಿ. ಆರೋಪಿಯನ್ನು ಪೊಲೀಸರು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ನರೋಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Shraddha Walker murder case: ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಮುಂದಿನ ಟಾರ್ಗೆಟ್‌ ಅಫ್ತಾಬ್ ಪೂನಾವಾಲಾ!

ಅಪರಿಚಿತ ವಾಹನ-ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರ ದುರ್ಮರಣ

ಬಳ್ಳಾರಿ: ಅಪರಿಚಿತ ವಾಹನ ಹಾಗೂ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು, ಒಬ್ಬರು ಗಾಯಗೊಂಡಿರುವ ಘಟನೆ (Bike Accident) ಬಳ್ಳಾರಿಯಲ್ಲಿ ನಡೆದಿದೆ. ಇಮ್ರಾನ್ (23), ಕಲಂ ಸಾಬ್ (19) ಮೃತರು. ಗಾಯಗೊಂಡಿರುವ ಶೇಕ್ ಜೊಸಿಂ ಎಂಬಾತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜ್ಯುವೆಲ್ಲರಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕರು ಬೈಕ್‌ನಲ್ಲಿ ಕೆಲಸಕ್ಕಾಗಿ ತೆಕ್ಕಲಕೋಟೆಯಿಂದ ಸಿರಗುಪ್ಪ ಕಡೆಗೆ ತೆರಳುತ್ತಿದ್ದರು. ಕೆಲಸಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.