Saturday, 10th May 2025

Pavagada News: ಅವಧಿ ಮುಗಿದ ಆಹಾರ ನೀಡಿದ್ದೇ ಕೋಣನಕುರಿಕೆ ಶಾಲೆಯ ಮಕ್ಕಳ ಅಸ್ವಸ್ಥತೆಗೆ ಕಾರಣ!

ಪಾವಗಡ: ತಾಲೂಕಿನ ಕೋಣನಕುರಿಕೆ ಗ್ರಾಮದ ಪ್ರಾಥಮಿಕ ಪಾಠಶಾಲೆ ಮಕ್ಕಳು ಅಸ್ವಸ್ಥಗೊಳ್ಳಲು ಅವಧಿ ಮುಗಿದ ಆಹಾರ ನೀಡಿದ್ದೇ ಕಾರಣ ಎಂಬ ಅಂಶ ಅಧಿಕಾರಿಗಳ ಪರಿಶೀಲನೆ ವೇಳೆ ಬಯಲಾಗಿದೆ. ಮಧ್ಯಾಹ್ನದ ಬಿಸಿಯೂಟದ ನಂತರ ಚಿಕ್ಕಿ, ಮೊಟ್ಟೆಯನ್ನು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮೂರ್ನಾಲ್ಕು ಮಕ್ಕಳಿಗೆ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಹೀಗಾಗಿ ಅಧಿಕಾರಿಗಳು ಶಾಲೆಗೆ (Pavagada News) ಭೇಟಿ ಪರಿಶೀಲನೆ ನಡೆಸಿದಾಗ ಘಟನೆಗೆ ಕಾರಣ ತಿಳಿದು ಬಂದಿದೆ.

ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು, ಶಾಲೆಗೆ ಶನಿವಾರ ಹೋಗಿ ಬಿಸಿಯೂಟಕ್ಕೆ ಬಳಸುತ್ತಿದ್ದ ಆಹಾರ ಪದಾರ್ಥಗಳು ಪರಿಶೀಲನೆ ಮಾಡಿದ್ದು, ಈ ವೇಳೆ ಸತ್ಯಾಸತ್ಯತೆ ಹೊರ ಬಂದಿದೆ. ಅವಧಿ ಮುಗಿದ ಮೂರ್ನಾಲ್ಕು ತಿಂಗಳ ನಂತರದ ಆಹಾರ ಪದಾರ್ಥಗಳನ್ನು ನೀಡಿದ್ದೇ, ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳಲು ಕಾರಣ ತಿಳಿದು ಬಂದಿದೆ.

ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲನೆ ಮಾಡಿದಾಗ ಈ ವಿಷಯ ಬಹಿರಂಗಪಟ್ಟಿದೆ. ಇನ್ನು ಶಾಲೆಗಳಿಗೆ ಮೇಲಧಿಕಾರಿಗಳು ಸರಿಯಾಗಿ ಭೇಟಿ ನೀಡುತ್ತಿಲ್ಲ, ಮೂಲಭೂತ ಸೌಕರ್ಯಗಳು ಇಲ್ಲ. ಈ ಬಗ್ಗೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Murder Case: ಗೆಳೆಯನ ಜತೆ ಹೆಂಡತಿ, ನಾದಿನಿ ಸಲುಗೆ; ಪ್ರಶ್ನಿಸಿದ ಗಂಡನನ್ನು ಕಡಗದಿಂದ ಗುದ್ದಿ ಕೊಲೆ!

ಶೆಟ್ಟಿಹಳ್ಳಿ ಗ್ರಾಮದಲ್ಲಿ ಕಳ್ಳರ ಕೈಚಳಕ ರೈತರಿಗೆ ಆತಂಕ ತಂದ ಕೇಬಲ್ ವೈರ್ ಕಳವು

ಚಿಂತಾಮಣಿ: ಒಂದೇ ಗ್ರಾಮದಲ್ಲಿ ಐದಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಅಳವಡಿಸಿದ್ದ ಕೇಬಲ್ ವೈರ್ ಗಳನ್ನು ಕಳ್ಳರು ಕದ್ದು ಪರಾರಿ ಆಗಿರುವ ಘಟನೆ ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಲಕ್ಷಮ್ಮ,ನಾರಾಯಣಮ್ಮ,ವೆಂಕಟಶಿವಾರೆಡ್ಡಿ,ಶ್ರೀನಿವಾಸರೆಡ್ಡಿ, ನರಸಿಂಹರೆಡ್ಡಿ,ಅವರ ತೋಟಗಳಲ್ಲಿ ವ್ಯವಸಾಯ ಮಾಡಲು ಬಳಕೆ ಮಾಡುತ್ತಿದ್ದ ಕೊಳವೆ ಬಾವಿಗಳ ಬಳಿ ಕಳ್ಳರು ತಮ್ಮ ಕರಾಮತ್ತನ್ನು ತೋರಿಸಿ ಕೇಬಲ್ ವೈರ್ ಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ.

ಇನ್ನೂ ಒಟ್ಟು 300 ಮೀಟರ್ ನಷ್ಟು ಕೇಬಲ್ ವೈರ್ ಕಳುವಾಗಿದ್ದು ಇದರಿಂದ ಸರಿಸುಮಾರು 1 ಲಕ್ಷದವರೆಗೂ ನಷ್ಟ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಘಟನೆಗೆ ಸಂಭಂಧಿಸಿದಂತೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಯನ್ನು ನಡೆಸುತ್ತಿದ್ದಾರೆ.

Fengal Cyclone: ತಪ್ಪಿದ ಭಾರೀ ದುರಂತ… ಫೆಂಗಲ್‌ ಚಂಡಮಾರುತದ ನಡುವೆಯೇ ಲ್ಯಾಂಡಿಂಗ್‌ಗೆ ಹೆಣಗಾಡಿದ ವಿಮಾನ- ವಿಡಿಯೊ ಇದೆ