Sunday, 11th May 2025

ಸೋನಿಯಾ ಗಾಂಧಿ ಹುಟ್ಟು ಹಬ್ಬದ ಪ್ರಯುಕ್ತ ವಿಶ್ವವಾಣಿ ಪುಸ್ತಕ ಬಿಡುಗಡೆ

ಪಾವಗಡ: ಸೋನಿಯಾ ಗಾಂಧಿ ರವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಜೀವನ ಚರಿತ್ರೆ ಸಂಚಿಕೆ ವಿಶ್ವವಾಣಿ ಪತ್ರಿಕೆ ಹೊರ ತಂದ ಪುಸ್ತಕವನ್ನು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ.ವೆಂಕಟೇಶ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಸೋಮ ವಾರ ಪಾವಗಡ ಕ್ಷೇತ್ರದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ಬಿಡುಗಡೆ ಮಾಡಿದರು.

ನಂತರ ಮಾತನಾಡಿ, ಒಂದು ಹೆಣ್ಷು ಇಷ್ಟು ದೊಡ್ಡ ಪಕ್ಷವನ್ನು ಒಂದು ಹೆಣ್ಣು ಸಕ್ರಿಯವಾಗಿ ಯಾವುದೇ ಗೊಂದಲಗಳು ಇಲ್ಲದೆ ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಮಹಿಳಾ ನಮ್ಮ ಕಾಂಗ್ರೆಸ್ ಪಕ್ಷದಲ್ಲಿರುವುದು ನಮ್ಮ ಹೆಮ್ಮೆಯ ವಿಷಯ ಎಂದರು.

ತಾಲ್ಲೂಕು ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ.ವೆಂಕಟೇಶ ಮಾತನಾಡಿ, ಸೋನಿಯಾ ಗಾಂಧಿಯವರು ಹಿಡಿ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಮುಡಿಪಾಗಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅವರೆ ನಮ್ಮ ಪ್ರಧಾನ ಮಂತ್ರಿ ಯಾಗಿ ಕಾಣಬೇಕು ಎಂಬುದು ನಮ್ಮ ಆಸೆ ಹಾಗೂ ಕಾಂಗ್ರೆಸ್ ಹಿರಿಯರ ಮಾರ್ಗ ದರ್ಶನ ಮೇರೆಗೆ ಕಾಂಗ್ರೆಸ್ ಬಲಪಡಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಬಳಗದ ಸದಸ್ಯರಿಗೆ ಹೆಚ್ಚು ಜವಬ್ದಾರಿ ನೀಡಿದ್ದೆವೆ ಎಂದರು.

ಈ ವೇಳೆ ಮಾಜಿ ಶಾಸಕರಾದ ಸೂಮ್ಲಾನಾಯ್ಕ್, ಹಿರಿಯ ಮುಖಂಡರುಗಳಾದ ತಾಳೆಮರದ ನರಸಿಂಹಯ್ಯ, ಫಜ್ಲುಸಾಬ್, ಶಂಕರೆಡ್ಡಿ, ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ, ಪುರಸಭೆ ಸದಸ್ಯರುಗಳಾದ ರಾಜೇಶ್, ರವಿ, ಚಂದ್ರಶೇಖರ್ ರೆಡ್ಡಿ, ಕಾಂಗ್ರೆಸ್ ಯುವ ಅಧ್ಯಕ್ಷ ಸುಜಿತ್ ಕುಮಾರ್, ರಾಜ್ಯ ಯುವ ಕಾಂಗ್ರೆಸ್ ಯುವ ಕಾರ್ಯದರ್ಶಿ ಕಿರಣ್ ಕುಮಾರ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಮಣಿ, ರಿಜ್ವಾನ್ ಇತರೆ ನೂರಾರು ಮಂದಿ ಇದ್ದರು.

Leave a Reply

Your email address will not be published. Required fields are marked *