Monday, 12th May 2025

ಉತ್ತರ ಕರ್ನಾಟಕದ ಸಂಪ್ರದಾಯ ಪರಿಚಯಿಸುವ ಮೂಲಕ ನಮ್ಮ ಸಂಸ್ಕ್ರತಿಯನ್ನು ಉಳಿಸಬೇಕು : ಸಚಿವ ಲಿಂಬಾವಳಿ

ಮಹದೇವಪುರ: ಬೆಂಗಳೂರು ನಗರದಲ್ಲಿದ್ದ ಕಾಡನ್ನು ನಾಶ ಮಾಡಿ ಬಹುಮಾಡಿಗಳನ್ನು ಕಟ್ಟಿ ಕಾಂಕ್ರೀಟ್ ನಗರವನ್ನಾಗಿ ಮಾಡಿದ್ದೆವೆ ಎಂದು ಅರಣ್ಯ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ ಅವರು ಬೇಸರ ವ್ಯಕ್ತಪಡಿಸಿದರು.

ಕ್ಷೇತ್ರದ ಗರುಡಾಚಾರ್ ಪಾಳ್ಯದ ಎಂ.ಎಲ್. ಆರ್ ಕನ್ವೆನ್ಷನ್‌ ಹಾಲ್ ನಲ್ಲಿ ಮಹದೇವಪುರ ವಲಯದ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಚಿವ ಅರವಿಂದ್ ಲಿಂಬಾವಳಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಉತ್ತರ ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆ, ಜನಪದವನ್ನು ರಾಜ್ಯದ ಪ್ರತಿಯೊಬ್ಬರಿಗೂ ಪರಿಚಯಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕೆಂದು ಹೇಳಿದರು.

ನಮ್ಮ ಸಂಸ್ಕೃತಿಯನ್ನು ನಾಡಿನ ಜನತೆಗೆ ಪರಿಚಯಿಸಿವುದರಿಂದ ಕನ್ನಡ ಸಂಸ್ಕೃತಿ ಅಭಿವೃದ್ಧಿಯಾಗವುದು. ಜಾನಪದ ಹಾಡು, ಉತ್ತರ ಕರ್ನಾಟಕ ಭಾಷೆ ಹೆಚ್ಚಾಗಿ ಬಳಸಿ ನಮ್ಮ ಶೈಲಿಯನ್ನು ಉಳಿಸಿ ಎಂದು ಕರೆ ನೀಡಿದರು.

ನಾವು ಉತ್ತರ ಕರ್ನಾಟಕ ಭಾಗ ದವರು ಯಾವುದೇ ಭಾಗಕ್ಕೆ ಹೋದರು ನಮ್ಮ ಭಾಷೆ ಶೈಲಿಯಲ್ಲಿ ಮಾತನಾಡಬೇಕು ಎಂದರು.

ನಮ್ಮ ಭಾಷೆಯ ಹಿರಿಮೆಯನ್ನು ಉಳಿಸಿ ಬೆಳೆಸಬೇಕು, ನಮ್ಮ ಭಾಗದ ಹಬ್ಬಗಳ ಆಚರಣೆ, ಕಲೆ, ಸಂಸ್ಕೃತಿ, ಪರಂಪರೆ, ಪೂರ್ವಜನರ ಮಾತು, ಹಿರಿಯರನ್ನು ಗೌರವಿಸುವ ಪದ್ದತಿ ನಮ್ಮಲ್ಲೆ ಅತಿ ಹೆಚ್ಚು ಕಾಣುತ್ತಿವೆ ಎಂದರು.

ಕಣ್ಮರೆಯಾಗುತ್ತಿರುವ ಶುದ್ಧ ಪರಿಸರ ಹಾಗೂ ವನ್ಯಜೀವಿಗಳ ಸಂತತಿ ಉಳಿಸಿದರೆ ನಮ್ಮ ಮಕ್ಕಳಿಗೆ ಕೋಡುವ ದೊಡ್ಡ ಆಸ್ತಿ ಎಂದರು.

ಉತ್ತರ ಕರ್ನಾಟಕದಲ್ಲಿ ಅರಣ್ಯ ಬಹಳ ಕಡಿಮೆ ಇರುವುದರಿಂದ ಪ್ರತಿಯೊಬ್ಬರು ತಮ್ಮ ಮನೆ ಹಾಗೂ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಅವನ್ನು ಪೋಷಿಸಿ ಎಂದು ಮನವಿ ಮಾಡಿದರು.

ಜಾನಪದ ಮೇಳವನ್ನು ನಮ್ಮ ಕ್ಷೇತ್ರದಲ್ಲಿ ಮಾಡಲು ತೀರ್ಮಾನಿಸಿದ್ದೆವೆ ಎಂದರು.

ಇದೇವೇಳೆ ಕ್ಷೇತ್ರದಲ್ಲಿ ಕನ್ನಡ ಭವನ, ಉತ್ತರ ಕರ್ನಾಟಕ ಸಂಘದ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಹದೇವಪುರ ಉತ್ತರ ಕರ್ನಾಟಕ ಜನತೆಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಮನೋಹರ್ ಯರಳ್ಳಿ, ರಮೇಶ್ ಅಥಣಿ, ಶ್ಯಾಮ್ ಸುಂದರ್ ಪುರಾಣಿಕ್, ಶಂಕರ್ ಪೋಲಿಸ್ ಗೌಡ್ರು, ಹನುಮಂತ ಸಿಂಗ್, ಧರ್ಮೆಗೌಡ, ಸ್ಥಳೀಯ ಮುಖಂಡರಾದ ಮನೋಹರ್ ರೆಡ್ಡಿ, ಹೂಡಿ ಪಿಳ್ಳಪ್ಪ, ಆಶೋಕ್ ರೆಡ್ಡಿ, ಅಭಿಷೇಕ್ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *