Sunday, 11th May 2025

ದಂಡಾಧಿಕಾರಿ ರಾಣಿ ನಿರ್ಲಕ್ಷ್ಯ … ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕರೋನಾ..!

ವಿಶೇಷ ವರದಿ : ಆನಂದಸ್ವಾಮಿ ಹಿರೇಮಠ

ಮಾನ್ವಿ : ತಾಲೂಕ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೋನಾ ವೈರಸ್ (ಕೋವಿಡ್-19) ಸೋಂಕು ಕಳೆದ ಹತ್ತು ದಿನಗಳಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತಿದ್ದರು ಕೂಡ ತಾಲೂಕು ದಂಡಾಧಿಕಾರಿ ಸಂತೋಷರಾಣಿ ಅವರು ಕೆಲವು ತಾಲ್ಲೂಕು ಮಟ್ಟದ ಅಧಿಕಾರಿ ಗಳ ಸಭೆ ನಡೆಸಿ ಯಾವುದೇ ಪತ್ರಕರ್ತರಿಗೆ ತಿಳಿಯದ ಹಾಗೆ ಕೆಲವು ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ನಿರ್ಲಕ್ಷ ವಹಿಸಿ ಕೈಚೆಲ್ಲಿ ಕೂತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ (ಕೋವಿಡ್-19) ವೈರಸ್‌ನ ಅರಿವು ಮೂಡಿಸಿ ಇತರರಿಗೆ ವೈರಸ್ ಹರಡದಂತೆ ಮುನ್ನೆ ಚ್ಚರಿಕೆ ಕ್ರಮವಾಗಿ ವಹಿಸಬೇಕಾಗಿರುವ ಅಧಿಕಾರಿಗಳು ಸಭೆಗೆ ಹಾಜರಾಗಿ ಗ್ರಾಮಗಳಿಗೆ ಭೇಟಿ ಕೊಡದೆ ತಾಲೂಕಿನ ಜನರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ಜಾಲತಾಣಗಳಲ್ಲಿ ಅಬ್ಬರದ ಚರ್ಚೆಗಳು ಕಂಡುಬರುತ್ತಿದೆ.

ತಾಲೂಕು ಆಡಳಿತ ನಡೆಸುವ ಕೋವಿಡ್ ಸಭೆಗೆ ಪತ್ರಕರ್ತರಿಗಿಲ್ಲ ಆಹ್ವಾನ…

ಅಧಿಕಾರಿಗಳು ಕೋವಿಡ್ ‌ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ, ಚಿಕಿತ್ಸಾ ಸೌಲಭ್ಯಗಳು ಹಾಗೂ ಸೋಂಕಿತರ‌ ಕುರಿತು ಸ್ಪಷ್ಟವಾದ ಮಾಹಿತಿಯನ್ನು ಮಾಧ್ಯಮಗಳ‌ ಮೂಲಕ ಜನರಿಗೆ ತಿಳಿಸುವ ಕಾರ್ಯ ನಡೆಯುತ್ತಿಲ್ಲ. ನಮಗೆ ಅಗತ್ಯ ಎನಿಸಿದರೆ ಮಾತ್ರ ಎಲ್ಲವನ್ನೂ ನಾವೇ ಕೇಳಿ ಮಾಹಿತಿ ಪಡೆಯಬೇಕು. ಆಗಲೂ ಸ್ಪಷ್ಟ ಮಾಹಿತಿ ಸಿಗುವುದಿಲ್ಲ. ಕೋವಿಡ್ ನಿಯಂತ್ರಣ ಕಾರ್ಯ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾದ್ಯಮದವರು ಹಾಗೂ ಸಂಸ್ಥೆಗಳು ಕೈಜೋಡಿಸಿ ಮಾಡಬೇಕಾದ ಕೆಲಸ. ಇಂತಹ ಪರಿಸ್ಥಿತಿ ಇದ್ದರೆ ಕೋವಿಡ್ ನಿಯಂತ್ರಣದ ಕುರಿತು ಪರಿಣಾಮಕಾರಿ ಜನಜಾಗೃತಿ ಸಾಧ್ಯವೇ?

ಜಿಲ್ಲಾಡಳಿತ ನೀಡುವ ಮಾಹಿತಿಯಂತೆ ತಾಲೂಕಿನಲ್ಲಿ ಪ್ರತಿ ದಿನದ ಮಾಹಿತಿಯನ್ನಾದರೂ ಪತ್ರಕರ್ತರಿಗೆ ತಿಳಿಸುವ ಸಾಮಾನ್ಯ ಸೌಜನ್ಯವಿಲ್ಲವಾಗಿದೆ ತಾಲೂಕ‌ ಆಡಳಿತಕ್ಕೆ ಇನ್ನೂ ಮೇಲಾದರೂ ತಾಲೂಕು ಆಡಳಿತ ನಡೆಸುವ ಸಭೆಗೆ ಪತ್ರಕರ್ತರಿಗೆ ಹಾಗೂ ಪ್ರತಿದಿನದ ಕರೋನ ಮಾಹಿತಿಯನ್ನು ನೀಡುತ್ತಾರೋ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *