Wednesday, 14th May 2025

ಅಣ್ಣ ತಂಗಿಯರ ಕೊಲೆ: ೧೨ ಗಂಟೆಯೊಳಗೆ ಆರೋಪಿಗಳ ದಸ್ತಗಿರಿ

ಹರಪನಹಳ್ಳಿ: ಹೆಂಡತಿಯ ಶೀಲ ಶಂಕಿಸಿ ಗಂಡ ಮತ್ತು ಮಾವನಿಂದ ಮಹಿಳೆ ಮತ್ತು ಅವಳ ಅಣ್ಣನ ಜೋಡಿ ಕೊಲೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಜರುಗಿದೆ.

ಕಾವ್ಯ(೨೮) ಹಾಗೂ ಕೊಟ್ರೇಶ(೩೨) ಕೊಲೆಗೀಡಾದ ಅಣ್ಣ ತಂಗಿಯರು. ಈ ಕುರಿತು ಮೃತಳ ತಾಯಿ ಕೊಟ್ಟೂರಿನ ಜಿ.ಬಸಮ್ಮ ಎಂಬುವವರು ಚಿಗಟೇರಿ ಪೋಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಮಗಳು ಕಾವ್ಯಳನ್ನು ಸುಮಾರು ೯ ರ‍್ಷಗಳ ಹಿಂದೆ ಚಿಗಟೇರಿ ಗ್ರಾಮದ ನಂದೀಶ ನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.

ಕಾವ್ಯಾಳು ತನ್ನ ತವರು ಮನೆಗೆ ಹೋಗಿ ಹೋಗಿ ಬರುವುದರಿಂದ ಹಾಗೂ ಬೇರೆಯವರೊಂದಿಗೆ ಮಾತನಾಡಿದ್ದನ್ನು ನೋಡಿ ಕಾವ್ಯಾಳ ಗಂಡ ನಂದೀಶ ಹಾಗೂ ಕಾವ್ಯಳ ಮಾವ ಜಾತಪ್ಪ ಇವರುಗಳು ಕಾವ್ಯಾಳ ಶೀಲದ ಮೇಲೆ ಸಂಶಯ ಪಟ್ಟು ಕಾವ್ಯಳು ತನ್ನ ಅಣ್ಣನೊಂದಿಗೆ ಮನೆಯಲ್ಲಿ ಅಕ್ಕ ಪಕ್ಕದಲ್ಲಿ ಮಲಗಿದ್ದನ್ನು ನೋಡಿದ ಕಾವ್ಯಳ ಗಂಡ ನಂದೀಶನು ತನ್ನ ತಂದೆಗೆ ವಿಷಯ ತಿಳಿಸಿದ್ದಾನೆ.

ತಂದೆ ಜಾತಪ್ಪ ಹಾಗೂ ಮಗ ನಂದೀಶ ಇಬ್ಬರೂ ಸೇರಿ ಕಾವ್ಯಾಳು ತನ್ನ ಅಣ್ಣನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನ ದಿಂದ ಭಾನುವಾರ ಬೆಳಗಿನ ಜಾವ ೨ ಗಂಟೆಯಿಂದ ೫ ಗಂಟೆ ಮದ್ಯದ ಅವಧಿಯಲ್ಲಿ ಕೊಟ್ರೇಶ ಹಾಗೂ ಕಾವ್ಯಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದು, ಇವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು ನೀಡಿರುತ್ತಾರೆ.

ಚಿಗಟೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳಾದ ಮೃತಳ ಗಂಡ ನಂದೀಶ ಹಾಗೂ ಮಾವ ಜಾತಪ್ಪ ಅವರನ್ನು ಪೋಲೀಸರು ಬಂಧಿಸಿದ್ದಾರೆ.

ವಿಜಯನಗರ ಜಿಲ್ಲಾ ಎಸ್ಪಿ ಶ್ರೀಹರಿಬಾಬು , ಡಿವೈಎಸ್ಪಿ ಡಾ.ವೆಂಕಟಪ್ಪ ನಾಯಕ,ತನಿಖಾಧಿಕಾರಿ ನಾಗರಾಜ ಎಂ.ಕಮ್ಮಾರ ಇವರುಗಳ ಮರ‍್ಗರ‍್ಶನದಲ್ಲಿ ಪಿಎಸ್ ಐ ಟಿ.ಜಿ.ನಾಗರಾಜ ಸಿಬ್ಬಂದಿ ಗಳ ವಿಶೇಷ ತಂಡವು ಪ್ರಕರಣ ದಾಖಲಾಗಿ ೧೨ ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಈ ಕರ‍್ಯಚರಣೆಯಲ್ಲಿ ಹರಪನಹಳ್ಳಿ ಪೋಲೀಸ್ ವೃತ್ತದ ಸಿಬ್ಬಂದಿಯವರಾದ ಕೊಟ್ರೇಶ, ಮುಭಾರಕ, ಲಕ್ಕಪ್ಪ, ರವಿದಾದಾಪುರ, ಮಹೇಶ, ಮಧುಕುಮಾರ ಹಾಗೂ ಇತರರು ಭಾಗಿಯಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿಯವರ ಕರ‍್ಯಚರಣೆಗೆ ವಿಜಯನಗರ ಎಸ್ಪಿ ಶ್ರೀಹರಿಬಾಬು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *