Sunday, 11th May 2025

Kiran Raj: ಸೂಪರ್ ಹೀರೊ ಆಗಿ ಬರಲಿದ್ದಾರೆ ‘ರಾನಿʼ ಕಿರಣ್ ರಾಜ್!

Kiran Raj

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ (Sandalwood) ತಮ್ಮದೇ ಆದ ಛಾಪು ಮೂಡಿಸಿರುವ ನಾಯಕ ಕಿರಣ್ ರಾಜ್ (Kiran Raj) ಸದ್ದಿಲ್ಲದೆ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕಾಗಿ ಸಿದ್ದತೆ ನೆಡೆಸುತ್ತಿದ್ದಾರೆ. ʼರಾನಿʼ ಚಿತ್ರದ (Ronny Movie) ಮೂಲಕ ಕ್ಲಾಸ್ ಅಂಡ್ ಮಾಸ್‌ಗೂ ಸೈ ಎನಿಸಿಕೊಂಡ ಕಿರಣ್ ರಾಜ್, ತಾನೆಂತ ಪ್ರತಿಭಾನ್ವಿತ ನಟ ಎನ್ನುದನ್ನು ಸಾಬೀತು ಪಡಿಸಿದ್ದಾರೆ. ಸದಾ ಪಾತ್ರ ಮತ್ತು ಕಥೆಯ ಬಗ್ಗೆ ಯೋಚಿಸುವ ಕಿರಣ್ ರಾಜ್, ಸೂಪರ್ ಹೀರೋ ಆಗಿ ತೆರೆಯ ಮೇಲೆ ಮಿಂಚಲಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ತಯಾರಿ ಜೋರಾಗಿ ನೆಡೆಸುತ್ತಿದ್ದಾರೆ.

ಈ ಪಾತ್ರದ ವಿಶೇಷ ತರಬೇತಿಗಾಗಿ ಕಿರಣ್ ರಾಜ್ ವಿದೇಶಕ್ಕೆ ತೆರಳಲಿದ್ದಾರೆ. ಇನ್ನು ಈ ನೂತನ ಚಿತ್ರಕ್ಕೆ ʼರಾನಿʼ ನಿರ್ದೇಶಕ ಗುರುತೇಜ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Fixed Deposit: ಎಸ್‌ಬಿಐ ಎಫ್‌ಡಿ; 7 ವರ್ಷಗಳವರೆಗೆ 7 ಲಕ್ಷ ರೂ. ಹೂಡಿಕೆ ಮಾಡಿದರೆ ಸಿಗುವ ಬಡ್ಡಿ ಎಷ್ಟು?

ಸನಾತನ ಧರ್ಮದ ಹಿನ್ನೆಲೆಯ ಕಥಾಹಂದರ ಈ ಚಿತ್ರದಲ್ಲಿರುತ್ತದೆ. ಶೀರ್ಷಿಕೆ, ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಸದ್ಯದಲ್ಲೇ ಘೋಷಣೆಯಾಗಲಿದೆ.