Monday, 12th May 2025

KEA Exam: ಡಿ.11ರ ಜಿಟಿಟಿಸಿ ಪರೀಕ್ಷೆ ಮುಂದೂಡಿಕೆ; ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

VAO Exam 2024

ಬೆಂಗಳೂರು: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ (ಜಿಟಿಟಿಸಿ) ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಡಿ.11ರಂದು ನಿಗದಿಯಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿಕೆಯಾಗಿದೆ. ರಾಜ್ಯದ ಮಾಜಿ ಸಿಎಂ ಮತ್ತು ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಅವರು ನಿಧನರಾದ ಹಿನ್ನಲೆಯಲ್ಲಿ ಡಿ.11 ರಂದು ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಹೀಗಾಗಿ ಪರೀಕ್ಷೆಯನ್ನು ಒಂದು ದಿನ ಮುಂದೂಡಿದ್ದು, ಡಿ.12ರಂದು ಗುರುವಾರ ಪರೀಕ್ಷೆ ನಡೆಯಲಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಡಿ.11ರಂದು ಜಿಟಿಟಿಸಿ ನೇಮಕಾತಿ ಪರೀಕ್ಷೆ ಡಿ.12ಕ್ಕೆ ಮುಂದೂಡಿಕೆಯಾಗಿದೆ. ಉಳಿದಂತೆ ಡಿ.14ರಂದು ನಿಗದಿಯಾಗಿದ್ದ ಗ್ರೇಡ್‌ 2 ಅಧಿಕಾರಿಗಳ ಹುದ್ದೆ ಪರೀಕ್ಷೆ ವೇಳಾ ಪಟ್ಟಿ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದೆ.

ಅಸಿಸ್ಟೆಂಟ್ ಗ್ರೇಡ್- 2 ಮತ್ತು ಆಫೀಸರ್ ಗ್ರೇಡ್-I ಹುದ್ದೆಗಳ ಪತ್ರಿಕೆ-2 ಅನ್ನು (ಕನ್ನಡ, ಇಂಗ್ಲೀಷ್ & ಕಂಪ್ಯೂಟರ್ ಜ್ಞಾನ) ಪರೀಕ್ಷಾ ವಿಧಾನ, ವಿರ್ದ್ಯಾಹತೆ ಹಾಗೂ ಪಠ್ಯಕ್ರಮ ಒಂದೇ ಆದಕಾರಣ ಒಂದೇ ಅವಧಿಯಲ್ಲಿ ನಡೆಸಲಾಗುತ್ತಿದೆ.

ಇನ್ಸ್ಟ್ರಕ್ಟರ್ ಗ್ರೇಡ್-1 & ಟೆಕ್ನಿಷಿಯನ್ ಗ್ರೇಡ್-2 (Tool & die Making) ಹುದ್ದೆಗಳಿಗೆ ಪರೀಕ್ಷಾ ವಿಧಾನ, ವಿರ್ದ್ಯಾಹತೆ ಹಾಗೂ ಪಠ್ಯಕ್ರಮ ಒಂದೇ ಆದಕಾರಣ ಒಂದೇ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಒಂದೇ ಪರೀಕ್ಷಾ ವಿಧಾನ, ಒಂದೇ ವಿದ್ಯಾರ್ಹತೆ ಮತ್ತು ಒಂದೇ ಪಠ್ಯಕ್ರಮದ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳು ಯಾವುದಾದರು ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿ, ಗೈರು ಹಾಜರಾದ ಪ್ರವೇಶ ಪತ್ರದೊಂದಿಗೆ ಪರೀಕ್ಷೆಗೆ ಹಾಜರಾದ ಪ್ರವೇಶ ಪತ್ರವನ್ನು ಲಗತ್ತಿಸಿ ಡಿ.18 ರೊಳಗೆ ಪ್ರಾಧಿಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಪರೀಕ್ಷಾ ಕೇಂದ್ರದಲ್ಲಿ Frisking ಮತ್ತು Bio-metric ತಪಾಸಣೆ ನಡೆಸಲಾಗುವುದರಿಂದ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಹಾಜರಿರಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Karnataka Weather: ಡಿ.12, 13 ರಂದು ರಾಜ್ಯದ ಹಲವೆಡೆ ಭಾರಿ ಮಳೆ ನಿರೀಕ್ಷೆ