Saturday, 10th May 2025

Kantara Movie: ‘ಕಾಂತಾರ’ ಚಿತ್ರತಂಡದ ಬಸ್ ಪಲ್ಟಿ, 6 ಮಂದಿಗೆ ಗಾಯ

Kantara Chapter 1

ಉಡುಪಿ: ರಿಶಬ್ ಶೆಟ್ಟಿ (Rishab Shetty) ಅವರು ನಟಿಸಿ ನಿರ್ದೇಶಿಸುತ್ತಿರುವ ಬಹುತಾರಾಗಣದ ‘ಕಾಂತಾರ ಚಾಪ್ಟರ್ 1’ (Kantara movie) ಸಿನಿಮಾ ತಂಡವಿದ್ದ ಮಿನಿ ಬಸ್‌ಗೆ (Road Accident) ಅಪಘಾತವಾಗಿದ್ದು, ಆರು ಮಂದಿಗೆ ಗಾಯವಾಗಿದೆ.

ಕೊಲ್ಲೂರು ವ್ಯಾಪ್ತಿಯಲ್ಲಿ ಭಾನುವಾರ ನವೆಂಬರ್ 24ರಂದು ರಾತ್ರಿ ಘಟನೆ ನಡೆದಿದ್ದರ ಬಗ್ಗೆ ವರದಿ ಆಗಿದೆ. ಜ್ಯೂನಿಯರ್ ಆರ್ಟಿಸ್ಟ್ ಅವರು ಭಾನುವಾರ ಮಿನಿ ಬಸ್‌ನಲ್ಲಿ ಸಾಗುತ್ತಿದ್ದರು. ಆ ಬಸ್ ಪಲ್ಟಿಯಾಗಿ ಕಲಾವಿದರಿಗೆ ಗಾಯಗಳಾಗಿವೆ. ಕೊಲ್ಲೂರಿನ ಬಳಿ ಇರುವ ಜಡ್ಕಳ್ ಸಮೀಪ ಸುಮಾರು 20ಕ್ಕೂ ಅಧಿಕ ಜನರಿದ್ದ ಈ ಮಿನಿ ಬಸ್ ಪಲ್ಟಿಯಾಗಿದೆ. ಒಟ್ಟು ಕನಿಷ್ಠ 6-7 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಕಾಂತಾರ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಅನೇಕ ಶೂಟಿಂಗ್ ಲೋಕೇಷನ್ ನೋಡಿಕೊಂಡಿದ್ದ ಬಂದಿದ್ದ ರಿಶಬ್ ಶೆಟ್ಟಿ ಅವರು ಚಿತ್ರೀಕರಣಕ್ಕೆಂದು ಪ್ಲಾನ್ ಮಾಡಿದ್ದರು. ಅದರ ಭಾಗವಾಗಿ ಚಿತ್ರತಂಡವು ಪ್ಲಾನ್ ಪ್ರಕಾರ ಶೂಟಿಂಗ್ ಸ್ಪಾಟ್‌ಗೆ ಜ್ಯೂನಿಯರ್ ಆರ್ಟಿಸ್ಟ್‌ಗಳನ್ನು ಮಿನಿಬಸ್‌ನಲ್ಲಿ ಕರೆದೊಯ್ಯತ್ತಿದ್ದರು. ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದೆ. ಬಾಕಿ ಇದ್ದ ಶೂಟಿಂಗ್‌ಗೆ ತೆರಳುವಾಗಿ ಈ ಅವಘಡ ಸಂಭವಿಸಿದೆ.

ಚಿತ್ರ ಕನ್ನಡ, ತೆಲುಗು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮುಂದಿನ ವರ್ಷ 2025ರಲ್ಲಿ ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಸಿನಿಮಾ ಕುರಿತು ಟೀಸರ್, ಪೋಸ್ಟರ್ ಬಿಡುಗಡೆ ಬೆನ್ನಲ್ಲೆ ಇತ್ತೀಚೆಗಷ್ಟೇ ನಿರ್ದೇಶಕ ರಿಶಬ್ ಶೆಟ್ಟಿ ಅವರು ಸಿನಿಮಾ ಯಾವಾಗ ರಿಲೀಸ್ ಎಂಬುದರ ಅಪ್ಡೇಟ್ ಕೊಟ್ಟಿದ್ದರು. ಬಾಕಿ ಇರುವ ಶೂಟಿಂಗ್ ತೆರಳಿದ್ದ ವೇಳೆ ಕಲಾವಿದರಿದ್ದ ಬಸ್ ಅಪಘಾತವಾಗಿದೆ. ಸದ್ಯ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.